ಕೋವಿಡ್ ಲಸಿಕೆಯ ಗೋಳು ತಪ್ಪಿದ್ದಲ್ಲ..

ಉಡುಪಿ: ಕೋರೊನಾ ಅಲೆಗೆ ಜನರು ಪಾಲಿಸಬೇಕಾದ ನಿಯಮ ಯಾವುದು ಅಂದರೆ ಮೊದಲು ನೆನಪಾಗುವುದೆ ಮಾಸ್ಕ್ ಮತ್ತು ಸಾಮಾಜಿಕ ಅಂತರ. ಆದರೇ ಇಲ್ಲಿ ಇಷ್ಟೊಂದುದ ಜನರನ್ನು ನೋಡಿ ಕೋರೋನಾ ಹತ್ತಿರ ಬಂದ್ರೆ ಆಶ್ಚರ್ಯ ಇಲ್ಲ.

ಇದು ಏನಾದರೂ ಕಾರ್ಯಕ್ರಮನ ಅಂದುಕೊಂಡ್ರೆ ತಪ್ಪು , ಬದಲಾಗಿ ಇಷ್ಟೊಂದು ಜನರು ಗುಂಪು ಗುಂಪಾಗಿ ನಿಂತಿರೋದು ಕೋರೊನಾ ವಿರುದ್ಧ ಲಸಿಕೆ ಪಡೆಯೋಕೆ ಅಂದ್ರೆ ವಿಪರ್ಯಾಸವೇ ಸರಿ.

ಹೌದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಬೆಳ್ಳಿಗೆ ಕಂಡುಬಂದ ದೃಶ್ಯ ನಾವೆಷ್ಟು ಎಚ್ಚರಿಕೆಯಿಂದ ಇದ್ದೇವೆ ಅನ್ನೋದನ್ನ ತೋರಿಸುತ್ತೆ.ಸರ್ಕಾರ ಏನೋ ಲಸಿಕೆ ಇದೆ ನೊಂದಾಯಿಸಿ, ಲಸಿಕೆ ಪಡೆದುಕೊಳ್ಳಿ ಅಂತೆಲ್ಲಾ ಮಾಧ್ಯಮದ ಮೂಲಕ ಹೇಳಿಕೆ ಕೊಟ್ಟರೂ,ಆಸ್ಪತ್ರೆಯಲ್ಲಿ ಮಾತ್ರ ಲಸಿಕೆಗಾಗಿ ಜನರು ಕಾದು ಕಾದು ಸುಸ್ತು.

ಯಾವಾಗ ನೋಡಿದರು ಸ್ಟಾಕ್ ಇಲ್ಲ ಎಂಬ ಸಬೂಬು. ವಾಕ್ಸಿನ್ ಬಂದರೆ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆಯಲು ಕಾಯುತ್ತಿರುವುದು.ಪಾಪ ಹಿರಿಯ ನಾಗರಿಕರಿಗೆ ಜಿಲ್ಲಾಡಳಿತ ಇಷ್ಟೊಂದು ಸತಾಯಿಸ ಬಾರದು.ಇಲ್ಲಿ ಖಂಡಿತವಾಗಿಯೂ ಕೋರೊನಾ ವಿರುದ್ಧ ಹೋರಾಡುವುದಕ್ಕಿಂತ ಸೊಂಕಿಗೆ ಆಹ್ವಾನ ನೀಡಿದಂತೆ ಕಾಣುತ್ತದೆ.

ಇನ್ನಾದರೂ ಆಡಳಿತ ವ್ಯವಸ್ಥೆ ಎಚೆತ್ತುಗೊಂಡು ಸಾರ್ವಜನಿಕರಿಗಾಗುವ ಕಿರಿ ಕಿರಿ ತಪ್ಪಿಸಬಹುದು.. ಕಾದು ನೋಡೋಣ..

 
 
 
 
 
 
 
 
 
 
 

Leave a Reply