ಅಗಸ್ಟ್ 26: ಉಡುಪಿ ಜಿಲ್ಲೆಯಲ್ಲಿ 1037 ಮಂದಿಗೆ ನೆಗೆಟಿವ್,7983 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಒಟ್ಟು 251 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10704. ಸೋಂಕಿತರಲ್ಲಿ ಉಡುಪಿಯ 110, ಕಾರ್ಕಳದ 84, ಕುಂದಾಪುರದ 81, ಹಾಗೂ ಇತರೆ ಜಿಲ್ಲೆಗಳ 6 ರೋಗಿಗಳು ಇದ್ದಾರೆ. 64 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 187 ಮಂದಿಗೆ ಲಕ್ಷಣಗಳು ಇಲ್ಲ. ಪ್ರಾಥಮಿಕ ಸಂಪರ್ಕದಿಂದ 114, ಐಎಲ್ಐ ಲಕ್ಷಣಗಳಿರುವ 45, ‘ಸಾರಿ’ ಲಕ್ಷಣಗಳಿರುವ 1 ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 1 ಮಂದಿಗೆ ಸೋಂಕು ತಗುಲಿದ್ದು, 90 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1124 ಜನರ ಗಂಟಲ ದ್ರವದ ಮಾದರಿ ಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬುಧವಾರ 1037 ವರದಿಗಳು ನೆಗೆಟಿವ್ ಬಂದಿದ್ದು, 251 ಪಾಸಿಟಿವ್ ಬಂದಿವೆ. 731 ವರದಿಗಳು ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ ಬುಧವಾರ 246 ಮಂದಿ ಗುಣಮುಖರಾಗಿದ್ದು ಇದುವರೆಗೂ 7983 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2629 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 92ಮಂದಿ ಸಾವನಪ್ಪಿದ್ದಾರೆ

 
 
 
 
 
 
 
 
 
 
 

Leave a Reply