ಉಡುಪಿ: ಉಡುಪಿಯ ಬೋರ್ಡ್ ಹೈಸ್ಕೂಲ್ ಕಟ್ಟಡದಲ್ಲಿ 70 ಮಂದಿ ನಿರ್ಗತಿಕರು, ಭಿಕ್ಷುಕರು, ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.ಅವರಿಗೆ ಎರಡು ದಿನಗಳ ಹಿಂದೆ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಹೋಪ್ ಇಂಡಿಯಾ ಫೌಂಡೇಷನ್ ನೇತೃತ್ವ ವಹಿಸಿತ್ತು.ಇದೀಗ ಎಲ್ಲರ ವರದಿ ಬಂದಿದ್ದು, 12 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಸೋಂಕು ತಗಲಿರುವ 12 ಜನರನ್ನು ಪ್ರತ್ಯೇಕವಾಗಿಟ್ಟು, ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಹೋಪ್ ಇಂಡಿಯಾ ಫೌಂಡೇಶನ್ ವಹಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದೆ. ಲಾಕ್ ಡೌನ್ ಮುಗಿಯುವ ತನಕ ಅವರ ಸೇವೆಯನ್ನು ಇದೇ ರೀತಿ ಮುಂದುವರಿಸುವುದಾಗಿ ಫೌಂಡೇಶನ್ ನ ಅನ್ಸಾರ್ ಅಹಮ್ಮದ್ ತಿಳಿಸಿದ್ದಾರೆ.