Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

“ಡಾ. ಜಿ. ಶಂಕರ ಮಹಿಳಾ ಕಾಲೇಜಿನ ವಿದ್ಯಾರ್ಥಿ ಪರಿಷತ್‌ಗೆ ಆಯ್ಕೆ”

ಉಡುಪಿ:- ನವೆಂಬರ್, ೧೦-೨೦೨೨
ಉಡುಪಿ ಜಿಲ್ಲೆಯ ಪ್ರತಿಷ್ಟಿತ ಡಾ. ಜಿ. ಶಂಕರ್ ಮಹಿಳಾ
ಕಾಲೇಜಿನ ವಿದ್ಯಾರ್ಥಿ ಪರಿಷತ್‌ಗೆ ೨೦೨೨-೨೩ನೇ ಸಾಲಿನಲ್ಲಿ ನಡೆದ
ಚುನಾವಣೆಯಲ್ಲಿ ಕಾಲೇಜಿನ ವಿದ್ಯಾರ್ಥಿ ನಾಯಕಿಯಾಗಿ ಕು.
ಹರ್ಷಿತಾ ಎಸ್. ಪುತ್ರನ್ ಅಂತಿಮ ಬಿ.ಕಾಂ. ‘ಬಿ’ ವಿಭಾಗ ಇವರು
ಆಯ್ಕೆಯಾಗಿರುತ್ತಾರೆ. ಕಾಲೇಜಿನ ಸಾಂಸ್ಕೃತಿಕ ವಿಭಾಗ
ಮುಖ್ಯ ಪ್ರತಿನಿಧಿಯಾಗಿ ಅಂತಿಮ ವರ್ಷದ ಬಿ.ಎ. (ಪಿ.ಆರ್.ಜೆ.)ನ
ಕು. ರಿಷೆಲ್ ಅವರು ಆಯ್ಕೆಯಾಗಿರುತ್ತಾರೆ ಹಾಗೂ
ಕಾಲೇಜಿನ ಮುಖ್ಯ ಕ್ರೀಡಾ ಪ್ರತಿನಿಧಿಯಾಗಿ ಕು. ಋತು
ಹೆಗ್ಡೆ, ಅಂತಿಮ ಬಿ.ಕಾಂ. ‘ಎ’ ವಿಭಾಗ ಇವರು
ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿ ಪರಿಷತ್‌ಗೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು
ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್.,
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್. ಬಲ್ಲಾಳ್,
ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ವಿದ್ಯಾ ಡಿ. ಹಾಗೂ
ಕ್ರೀಡಾಧಿಕಾರಿ ಡಾ. ರಾಮಚಂದ್ರ ಪಾಟ್ಕರ್ ಮತ್ತು ಕಾಲೇಜಿನ
ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು
ಅಭಿನಂದಿಸಿರುತ್ತಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!