25 ಸೆಂಟಿ ಮೀಟರ್ ಉದ್ದದ ಪಾತರಗಿತ್ತಿ

ಪರ್ಕಳದ ಶೆಟ್ಟಿ ಬೆಟ್ಟು ನಲ್ಲಿ 25 ಸೆಂಟಿ ಮೀಟರ್ ಉದ್ದದ ಬೃಹದಾಕಾರದ ಪಾತರಗಿತ್ತಿ (ಚಿಟ್ಟೆ)  ಪತ್ತೆ.!

ಪರ್ಕಳದ ಶೆಟ್ಟಿ ಬೆಟ್ಟು ವಾರ್ಡಿನ ಮಾರುತಿ ನಗರದ ಅಕ್ಕು ಎಂಬವರ ಮನೆಯಲ್ಲಿ ಬೃಹದಾಕಾರದ 25 ಸೆಂಟಿಮೀಟರ್ ಅಗಲದ 15 ಸೆಂಟಿಮೀಟರ ಎತ್ತರದ ಪ್ರಬಂಧ ಬಹುವುಳ್ಳ ರೆಕ್ಕೆಯನ್ನು ಹೊಂದಿರುವ ಪಾತರಗಿತ್ತಿ ಚಿಟ್ಟೆಯೊಂದು ತೆಂಗಿನ ಮರದಲ್ಲಿ ಕುಳಿತಿತ್ತು, ಈ ಬೃಹದಾಕಾರದ ಚಿಟ್ಟೆಯನ್ನು ಕಾಗೆಗಳು ಸುತ್ತುವರಿದಿದ್ದನ್ನು ಗಮನಿಸಿದ ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಅವರು ಅದನ್ನು ಸುರಕ್ಷಿತವಾಗಿ ಕಾಗೆಯ ಹಾವಳಿಯಿಂದ ರಕ್ಷಿಸಿದರು.  

ಅದನ್ನು ತೆಂಗಿನ ಗರಿಯ(ಮಡಲು) ಹೊದಿಕೆಯನ್ನು ನೀಡಿ, ರಕ್ಷಣೆ ಮಾಡಿದ್ದಾರೆ.  ಇದೀಗ ಮೊಟ್ಟೆ ಇಡುವ ಸ್ಥಿತಿಯಲ್ಲಿರುವಂತೆ ಕಂಡುಬಂದಿದೆ ಎಂದು ಗಣೇಶ್ ಕುಮಾರ್ ಮಾರುತಿನಗರ ತಿಳಿಸಿದ್ದಾರೆ.  

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply