Janardhan Kodavoor/ Team KaravaliXpress
27.6 C
Udupi
Monday, November 28, 2022
Sathyanatha Stores Brahmavara

ಪ್ರಾಕೃತಿಕ ವಿಕೋಪದಡಿ ಪರಿಹಾರ ಧನ ಚೆಕ್ – ಶಾಸಕ ರಘುಪತಿ ಭಟ್ ವಿತರಣೆ

ಬ್ರಹ್ಮಾವರ : ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 3 ಕುಟುಂಬಗಳಿಗೆ ಶಾಸಕರ ಶಿಫಾರಸಿನ ಮೇರೆಗೆ ಮಂಜೂರಾದ ರೂ. 97,305/- ಮೊತ್ತದ ಚೆಕ್ ಇಂದು ಫಲಾನುಭವಿಗಳಿಗೆ ಶಾಸಕ ಕೆ ರಘುಪತಿ ಭಟ್ ವಿತರಿಸಿದರು.

ಕೆಂಜೂರು ಗ್ರಾಮದ ಬುಡ್ಡು ಹಾಂಡ್ತಿ ಅವರಿಗೆ ರೂ. 52,305/-, ಕುದಿ ಗ್ರಾಮದ ವಿಜಯರಿಗೆ ರೂ. 15,000/-ಹಾಗೂ ಪೆಜಮಂಗೂರು ಗ್ರಾಮದ ಕೆ. ಜಯಲಕ್ಷ್ಮಿ ಬಾಯಿ ಅವರಿಗೆ ರೂ. 30,000/- ಮೊತ್ತದ ಚೆಕ್ ಸೇರಿದಂತೆ ಒಟ್ಟು ರೂ. 97,305/- ಮೊತ್ತದ ಚೆಕ್ಕನ್ನು ವಿತರಿಸಿದರು.

ಕಳ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷ ನವೀನ್ ಪೂಜಾರಿ, ಪಂಚಾಯತ್ ಸದಸ್ಯರಾದ ಆದರ್ಶ ಶೆಟ್ಟಿ, ದಿನೇಶ್ ಶೆಟ್ಟಿ, ರಮಾನಂದ ಶೆಟ್ಟಿ ಮತ್ತು ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!