ಸಮುದ್ರದ ಹವಾಮಾನದಲ್ಲಿ ವೈಪರಿತ್ಯ -ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್

ಮಂಗಳೂರು: ರಾಜ್ಯದಲ್ಲಿ ಮೇ 16ರಂದು ಚಂಡಮಾರುತ ಬೀಸಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ. ಮಂಗಳೂರಿನಲ್ಲಿ ಮೂರು ದಿನಗಳ ಮುನ್ನವೇ ಎಚ್ಚರಿಕೆ ನೀಡಲಾಗುತ್ತಿದ್ದು, ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿರುವವರನ್ನು ಕರೆದು ಬೇಗ ದಡ ಸೇರಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಮುಂದಿನ 5 ದಿನ
ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ. ವಾಯುಭಾರತ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮೇ 16ರಂದು ರಾಜ್ಯದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಬುಧವಾರದಂದೇ ಮೂನ್ಸೂಚನೆ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಘೋಷಣೆ ಮಾಡುವ ಮೂಲಕ ಮೀನುಗಾರರ ರಕ್ಷಣೆಗಾಗಿ ಸೂಚನೆ ನೀಡಲು ಪ್ರಾರಂಭಿಸಿದ್ದಾರೆ. ‘ಮೀನುಗಾರರೇ, ಸಮುದ್ರದ ಹವಾಮಾನ ಕೆಟ್ಟುಹೋಗಿದೆ, ಬೇಗ ಬೇಗ ದಡ ಸೇರಿಕೊಳ್ಳಿ..’ ಎಂಬುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಎಲ್ಲರೂ ಆದಷ್ಟು ಬೇಗ ಹತ್ತಿರದ ಬಂದರನ್ನು ಸೇರಿಕೊಳ್ಳಿ ಎಂಬುದಾಗಿ ಸಂದೇಶ ರವಾನಿಸಿದ್ದಾರೆ.

 
 
 
 
 
 
 
 
 
 
 

Leave a Reply