ಯುವತಿಯ ಮೇಲೆ ಅತ್ಯಾಚಾರ~ವೆರೋನಿಕಾ ಕರ್ನೆಲಿಯೊ ಖಂಡನೆ

ಉಡುಪಿ : ಉತ್ತರ ಪ್ರದೇಶದ ಅತ್ರಾಸ್ ನಲ್ಲಿ ಪೈಶಾಚಿಕವಾಗಿ ಅತ್ಯಾಚಾರ ಮಾಡಿ, ಸಾಕ್ಷಿ ಹೇಳದಂತೆ ಯುವತಿಯ ನಾಲಗೆ ಕತ್ತರಿಸಿ, ಬಳಿಕ  ಸತ್ತ ಮೇಲೆ ಮೃತದೇಹವನ್ನು ಕುಟುಂಬದವರಿಗೆ ನೋಡಲು ಬಿಡದೇ, ರಾತ್ರಿ ಹೊತ್ತಿನಲ್ಲಿ ಸರಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ, ಪೊಲೀಸ್ ಇಲಾಖೆ ಯುವತಿಯ ಅಂತ್ಯಕ್ರಿಯೆ ಮಾಡಿರುವಂತಹ ಘಟನೆಯನ್ನು  ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ತೀವ್ರವಾಗಿ ಖಂಡಿಸಿದ್ದಾರೆ.
ಇಂತಹ ಅವಮಾನವೀಯ ಮತ್ತು ಹೀನ ಕೃತ್ಯಕ್ಕೆ ಸಮಾಜ​​ವೇ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಯ ವಿರುದ್ಧ ಮಹಿಳೆಯರು ಮತ್ತು ಸಮಾಜವೇ ​ಎದ್ದೇಳ ಬೇಕಾಗಿದೆ. ಯಾರದೇ ಪ್ರಭಾವಕ್ಕೆ ಒಳಪಡದೆ, ದಿಟ್ಟತನದಿಂದ ಈ ವರದಿಯನ್ನು ಬಯಲಿಗೆಳೆದ ತನುಶ್ರೀ ಅವರ ಸಾಧನೆಯನ್ನು ಅಭಿನಂದಿಸುವುದಾಗಿ ವೆರೋನಿಕ ಕರ್ನೇಲಿಯೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಹಲವು ಸಮಯಗಳಿಂದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ದಲಿತ ಯುವತಿಯರೇ ಬಲಿಪಶುಗಳಾಗುತ್ತಿದ್ದಾರೆ. ಆದರೆ ನ್ಯಾಯ ಒದಗಿಸಬೇಕಾದವರು ನ್ಯಾಯ ಒದಗಿಸದೇ ಇರುವುದು ನಮ್ಮೆಲ್ಲರನ್ನು ಚಿಂತೆಗೀಡು ಮಾಡಿದೆ.  ಈ ಪ್ರಕರಣದಲ್ಲಾದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಿ, ನ್ಯಾಯ ಸಿಗಲಿ ಮತ್ತು ಇಂತಹ ಹೇಯ ಕೃತ್ಯಗಳು ನಡೆಯದಿರಲಿ.

ಸಂತ್ರಸ್ತ ಕುಟುಂಬಕ್ಕೆ ಸರಕಾರ ಗರಿಷ್ಠ ಮೊತ್ತದ ಪರಿಹಾರ ನೀಡುವುದರ ಜೊತೆಗೆ, ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿಮಾಡುವಂತೆ ಉತ್ತರ ಪ್ರದೇಶ ಸರಕಾರವನ್ನು ವೆರೋನಿಕಾ ಕರ್ನೇಲಿಯೋ ಒತ್ತಾಯಿಸಿದ್ದಾರೆ.
 
 
 
 
 
 
 
 
 
 
 

Leave a Reply