ತಾಡೋಲೆಗ್ರಂಥಗಳ ರಾಮಾಯಣ, ಮಹಾಭಾರತ ಗ್ರಂಥಗಳ ಪತ್ತೆ

ಉಡುಪಿ ಜಿಲ್ಲೆಯ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ-ಕ್ಷೇತ್ರಕಾರ್ಯ ಅನ್ವೇಷಣೆ ನಡೆಸಿದಾಗ ನಾಯ್ಕನ ಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ (ಗೋಕರ್ಣ ಮಠ–ಜಿ.ಎಸ್.ಬಿ.) ನಂದನವನ ಗ್ರಾಮ, ಕೆರ್ಗಲ್ -ಬೈಂದೂರು ತಾ. ತಾಡೋಲೆಗ್ರಂಥಗಳ ಪತ್ತೆಯಾಯಿತು.

ನಂದನವನದಲ್ಲಿ ಜೈನ ಶಾಸನ, ದೇವಳದ ಮುಂಭಾಗದಲ್ಲಿ ಎರಡು ಶಾಸನಗಳನ್ನು ದಾಖಲಿಕರಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಅಪೂರ್ವ ತಾಡೋಲೆಗ್ರಂಥಗಳು ಪತ್ತೆಯಾದವು.

ಕ್ಷೇತ್ರಕಾರ್ಯದಲ್ಲಿ ಶ್ರುತೇಶ್ ಆಚಾರ್ಯ, ಶ್ರೀಧರ ಭಟ್, ಎಸ್.ಎ.ಕೃಷ್ಣಯ್ಯ ಸಹಕರಿಸಿದರು.

ಬಹಳಾ ಹಿಂದಿನಿನಿಂದಲೂ ದೇವಸ್ಥಾನದ ಪರ್ವದಿನಗಳಲ್ಲಿ ಪೂಜಿಸಿಕೊಂಡುಬಂದಿರುವ ಈ ಗ್ರಂಥಗಳಿಗೆ ಆರಂಭದ ದಿನದಿಂದ ಯಾವುದೇ ಸಂಸ್ಕರಣ ನೀಡಿಲ್ಲ (ಸುಮಾರು ಮನ್ನೂರು ವರುಷಗಳಿಂದ) ಎಂದು ತಿಳಿದು ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ (ಉಡುಪಿ) ಇವುಗಳನ್ನು ಪಡೆದು ವಿಧಿಬದ್ಧವಾಗಿ ಸಂಸ್ಕರಣಗೊಳಿಸಿ ಕಡುಕಾವಿ ಬಟ್ಟೆಯಲ್ಲಿ ಸುತ್ತಿ(ಗಾಳಿಯಾಡದಂತೆ ಬಟ್ಟೆ-ಬಿಗಿಗೊಳಿಸಿ) ಇದರ ಮೂಲ ವಕ್ತಾರರಾದ ಶ್ರೀಸುರೇಂದ್ರ ಪೈ ಇವರಿಗೆ ೨೮-೯-೨೦೨೨ರಂದು ಜಗನ್ನಾಥ ಸಭಾಭವನದ ಕಛೇರಿಯಲ್ಲಿ ಹಸ್ತಾಂತರ ಮಾಡಲಾಯಿತು.. ತಾಡೋಲೆಗಳನ್ನು ಸಂಸ್ಕರಣಗೊಳಿಸಿದವರು ಪ್ರೊ.ಎಸ್.ಎ.ಕೃಷ್ಣಯ್ಯ ಮತ್ತು ಪ್ರೊ.ಮ್ಯೂಸಿಕ ಸುಪ್ರಿಯ.

ಉಡುಪಿಯ ಸಮಾಜ ಸೇವಾನಿರತರಾದ ಶ್ರೀ ವಿಶ್ವನಾಥ ಶೆಣೈ, ಶ್ರೀ ಇಂದ್ರಾಳಿ ಬಿ. ಜಯಕರಶೆಟ್ಟಿ, ಇತಿಹಾಸ ತಜ್ಞ ಶ್ರೀಧರ ಭಟ್ ಹಾಗೂ ಎಸ್.ಎ.ಕೃಷ್ಣಯ್ಯ ಇವರುಗಳು ಕಾರ್ಯಕ್ರಮ ನಡೆಸಿಕೊಟ್ಟರು;

ಶಿಥಿಲಾವಸ್ಥೆಯಲ್ಲಿದ್ದ ಈ ಗ್ರಂಥಗಳನ್ನು ವೈಜ್ಞಾನಿಕವಾಗಿ ಸಂಸ್ಕರಣಗೊಳಿಸಿ ಒಂದು ಬದಿಯಲ್ಲಿ ಕಡುಕಾವಿ ಚೀಲಗಳಲ್ಲಿ ತಾಡೋಲೆಗಳ ಗರಿಗಳು ಅಡಕಗೊಳ್ಳುವಂತೆ ಸುರಕ್ಷಣಾ ಕ್ರಮದ ವಿಧಾನ ಪಾಲಿಸಲಾಗಿದ್ದು ಇದೇ ಮೊದಲ ಪ್ರಯೋಗ. ಇದರಿಂದ ಬಹುತೇಕ ಅಂಚುಗಳು ಶಿಥಿಲಗೊಳ್ಳುವುದನ್ನು ತಪ್ಪಿಸಬಹುದು. ಹಾಗೂ ಚೀಲಗಳ ಮೇಲ್ಭಾಗದಲ್ಲಿ ತಾಡೋಲೆಗರಿಗಳ ಅಂಕಿಗಳನ್ನು ನಮೂದಿಸುವ ಮೂಲಕ ರಕ್ಷಣೆಗೆ ಒತ್ತುನೀಡಲಾಗಿದೆ; ಬಹಳಾ ಹಿಂದಿನಿಂದ ಬಿದಿರಿನ ಹಂಡೆಯಲ್ಲಿ ಗ್ರಂಥಗಳನ್ನು ಸಂರಕ್ಷಣೆ ಮಾಡಲಾಗುತಿತ್ತು, ಇದೀಗ ಈ ಕ್ರಮಗಳು ಲುಪ್ತವಾಗಿವೆ. ಮುಂದಿನದಿನಗಳಲ್ಲಿ ಬಿದಿರಿನ ಹಂಡೆಗಳಲ್ಲಿ ಸಂರಕ್ಷಣೆ ಮಾಡುವ ಉದ್ಧೇಶ ಇದೆ ಎಂದು ಪ್ರಾಚ್ಯಸಂಚಯ ನಿರ್ದೇಶಕರು ತಿಳಿಸಿರುವರು.

ಸುಮಾರು ೧೭ನೇ ಶತಮಾನದಲ್ಲಿ ಈ ತಾಡೋಲೆಗಳನ್ನು ಸಂರಚಿಸಿರಬಹುದೆಂದು ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಇವರು ತಿಳಿಸಿರುತ್ತಾರೆ. ಲಿಪಿ ಹಾಗೂ ಭಾಷೆ ಕನ್ನಡ

ಶ್ರೀಸುರೇಂದ್ರ ಪೈ ಇವರು ತಿಳಿಸುವಂತೆ ಶ್ರೀಅನಂತಯ್ಯ ಶಾನುಭೋಗರ ಮನೆಯಲ್ಲಿ ಈ ತಾಡೋಲೆಗಳು ಮೊದಲು ಲಭ್ಯವಾಗಿದ್ದು, ಆರಂಭದಲ್ಲಿನ ಅಗ್ನಿ- ಅವಘಡದಲ್ಲಿ ಉಳಿದ ಈ ಅಪೂರ್ವ ಹಸ್ತಪ್ರತಿಗಳು ಇದೀಗ ದೇವಳದಲ್ಲಿ ಸುರಕ್ಷಿತವಾಗಿ ಇಡುವಂತಹ ವ್ಯವಸ್ಥೆ -ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೃತಿಗಳನ್ನು ಶ್ರೀ ಪರಿವ್ರಾಜಕ ಪರಮಹಂಸಾನಂದ ಶ್ರೀ ವಿಮಲಾನಂದ ಶ್ರೀಪಾದರು ಬರೆದಿರುವ ಅಂಕಿತ ವಿದೆ

 
 
 
 
 
 
 
 
 
 
 

Leave a Reply