ಬಾಹ್ಯ ಸೌಂದರ್ಯದೊಂದಿಗೆ ಆಂತರಿಕ ಸೌಂದರ್ಯವೂ ಮುಖ್ಯ~ ಕೆ.ರಮೇಶ್ ಪೈ

ಮಹಿಳೆಯರಿಗಾಗಲೀ, ಪುರುಷರಿಗಾಗಲೀ ಸ್ವ-ಉದ್ಯೋಗ ಮಾಡಲು ಸಾಕಷ್ಟು ಅವಕಾಶ ಇದೆ. ಅದು ಪ್ರಸ್ತುತ ಸಮಯದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತಿರುವ ವಿಷಯ. ಆದಿ ಕಾಲದಿಂದಲೂ ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ  ಕೊಡಲಾಗುತ್ತಿತ್ತು.  ಇತ್ತೀಚೆಗೆ ಈ ಕ್ಷೇತ್ರದಲ್ಲಿ ಅವಿಷ್ಕಾರಗಳು ಆಗುತ್ತಿದ್ದು ಪ್ರಕೃತಿಯ ವಸ್ತುಗಳಿಂದಲೇ ಬ್ಯುಟಿಷನ್‌ಗೆ ಬೇಕಾದ ಪ್ರಸಾಧನವನ್ನು ತಯಾರಿಸಲಾಗುತ್ತದೆ.
 ಆರ್ಯುವೇದ ಮತ್ತು ಹರ್ಬಲ್ ಸೌಂದರ್ಯ ವರ್ಧಕಗಳು  ಈಗಿನ ಬ್ಯುಟಿಷನ್‌ಗೆ ಪ್ರಾಶಸ್ತ ಕೊಡಲಾಗುತ್ತಿದೆ.  ಬ್ಯುಟಿಷಿಯನ್ ತರಬೇತಿಯು ಒಂದು ವಿಶಾಲವಾದ ಕ್ಷೇತ್ರವಾಗಿದ್ದು ಅನೇಕ ವಿಷಯಗಳನ್ನು ಒಳಗೊಂಡಿದೆ.  ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಅಷ್ಟೇ ಆಂತರಿಕ ಸೌಂದರ್ಯವು ಮುಖ್ಯ ಎಂದು ಕೆನರಾ ಬ್ಯಾಂಕ್ ರೀಜಿನಲ್ ಆಫೀಸ್-1ರ  ವಿಭಾಗಿಯ ವ್ಯವಸ್ಥಾಪಕರಾದ ಕೆ.ರಮೇಶ ಪೈಯವರು ಒಂದು ವಾರಗಳ ಬ್ಯುಟಿಷಿಯನ್ ತರಬೇತಿಯನ್ನು ಬಿವಿಟಿಯಲ್ಲಿ ಉದ್ಘಾಟಿಸುತ್ತಾ ಮೇಲಿನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು
ಅಲ್ಲದೆ ತರಬೇತಿ ಬಳಿಕ ಸ್ವಂತ ಉದ್ಯೋಗ ಕೈಗೊಳ್ಳವರೇ ಬ್ಯಾಂಕಿನಿಂದ  ಮಹಿಳೆಯರಿಗೆ ದೊರೆಯುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಈ ತರಬೇತಿಯು ಬಿವಿಟಿ ಮಣಿಪಾಲ, ಕೆನರಾ ಬ್ಯಾಂಕ್ ರೀಜಿನಲ್ ಆಫೀಸ್-1 ಉಡುಪಿ, ಕೆನರಾ ಬ್ಯಾಂಕ್ ಜುಬ್ಯುಲಿ ಎಜ್ಯುಕೇಶನ್ ಫಂಡ್, ಬೆಂಗಳೂರು ಇವರ ಸಹಯೋಗದಲ್ಲಿ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ವೀಣಾ ಸಂತೋಷ ಸಂಪನ್ನೂಲ ವ್ಯಕ್ತಿಯಾಗಿರುವರು. ಈ ಒಂದು ವಾರದ ತರಬೇತಿ ಕಾರ್ಯಕ್ರಮದಲ್ಲಿ 25ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ಸಂಸ್ಥೆಯ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಧನ್ಯವಾದವನಿತ್ತರು. ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ  ಪ್ರಸ್ತಾವಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು.  
 
 
 
 
 
 
 
 
 
 
 

Leave a Reply