ಮತ್ತೆ ಕೊಚ್ಚಿ ಹೋಯ್ತು ನಡೂರು ಕಿರು ಸೇತುವೆ

ಬ್ರಹ್ಮಾವರ : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮವಾಗಿ ಮಂದಾರ್ತಿ ಮತ್ತು ಕೂರಾಡಿ ಬಂಡೀಮಠ ಸಂಪರ್ಕ ರಸ್ತೆಯ ಕಾಡೂರು ಗ್ರಾಪಂ ವ್ಯಾಪ್ತಿಯ ನಡೂರು ತಾತ್ಕಾಲಿಕ ಕಿರು ಸೇತುವೆ ಇದೀಗ ಎರಡನೇ ಬಾರಿಗೆ ಕೊಚ್ಚಿಕೊಂಡು ಹೋಗಿದೆ.

ಕಳೆದ ಬಾರಿಯ ಮಳೆಗಾಲದಲ್ಲಿ ಈ ಕಿರು ಸೇತುವೆ ಮುರಿದು ಬಿದ್ದಿತ್ತು. ನಂತರ ಸ್ಥಳೀಯರು ಸೇರಿ ಗ್ರಾಪಂನಿಂದ ಮೋರಿ ಅಳವಡಿಸಿ ಮಣ್ಣು ಹಾಕಿ ತಾತ್ಕಾಲಿಕ ಕಿರು ಸೇತುವೆಯನ್ನು ನಿರ್ಮಿಸಿದ್ದರು. ಜು.15ರಂದು ಮಳೆಯ ನೀರಿನ ರಭಸಕ್ಕೆ ಮೋರಿ ಹಾಗೂ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಪರ್ಕ ಕಡಿದು ಕೊಂಡಿದೆ.

ಈ ರಸ್ತೆಯಲ್ಲಿ ಬಾರಕೂರು -ನಡೂರು ಮೂಲಕ ಮಂದಾರ್ತಿಗೆ ಸಾಗಲು ಕೇವಲ 6ಕಿ.ಮಿ.ನಲ್ಲಿ ದೂರ ಇದ್ದು, ಇದೀಗ ಸಂಪರ್ಕ ಕಡಿತಗೊಂಡ ಕಾರಣ ಮಂದಾರ್ತಿ ಹೋಗಲು ರಂಗನಕೆರೆ ಮೂಲಕ 16ಕಿ.ಮೀ. ದೂರು ಸುತ್ತಿ ಬಳಸಿ ಹೋಗಬೇಕಾಗಿದೆ.ತಕ್ಷಣ ಇಲ್ಲಿ ಶಾಶ್ವತ ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 
 
 
 
 
 
 
 
 

Leave a Reply