Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ – ಭೂ ಮಾಲಕರೊಂದಿಗೆ ರಘುಪತಿ ಭಟ್ ಸಭೆ

ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪಡಿಸಲು ಟಿ.ಡಿ.ಆರ್. ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿರುವಂತೆ ಭೂಸ್ವಾಧೀನದ ಬಗ್ಗೆ ಭೂಮಾಲಕರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಬುಧವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿದರು.
ದಿನವಿಡೀ ನಡೆದ ಸಭೆಯಲ್ಲಿ ಭೂಮಾಲಕರು ಪರಿಹಾರ ಒದಗಿಸುವ ಬಗ್ಗೆ ಮನವಿ ಮಾಡಿದರು. ಇಲಾಖಾ ಅಧಿಕಾರಿಗಳೊಂದಿಗೆ ಸೇರಿ ನಡೆಸಿದ ಸಭೆಯಲ್ಲಿ ಶಾಸಕರು ಪ್ರತಿ ಭೂಮಾಲಕರಲ್ಲಿ  ಪ್ರತ್ಯೇಕವಾಗಿ ಚರ್ಚಿಸಿ ಮನವೊಲಿಸಿದರು

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸಹಾಯಕ ಆಯುಕ್ತರಾದ ರಾಜು. ಕೆ, ನಗರಸಭಾ ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್, ಲೋಕೋಪಯೋಗಿ ಇಲಾಖೆ  ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಕಿರಿಯ ಅಭಿಯಂತರರಾದ ಸೋಮನಾಥ್, ನಗರ ಸಭೆಯ ಅಭಿಯಂತರರಾದ ದುರ್ಗಾಪ್ರಸಾದ್,  ನಗರಾಭಿವೃದ್ಧಿ ಪ್ರಾಧಿಕಾರದ ಜಿತೇಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!