ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಸಂಪುಟದಲ್ಲಿ ಅನುಮೋದನ

ಉಡುಪಿ ನಗರ ಬಿಜೆಪಿಯಿಂದ ಶಾಸಕ ರಘುಪತಿ ಭಟ್ ರವರಿಗೆ ಅಭಿನಂದನೆ, ಹರ್ಷಾಚರಣೆ

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ  ರೂ. 115   ಕೋಟಿ ವೆಚ್ಚದ ಯೋಜನೆ ಗುರುವಾರ  ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಗೊಂಡ ಹಿನ್ನೆಲೆಯಲ್ಲಿ  ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಸಂಭ್ರಮಾಚರಣೆ  ಹಾಗು ಶಾಸಕ ಕೆ,ರಘುಪತಿ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು  ಗುರು ವಾರ ಮದ್ಯಾಹ್ನ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ, ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಿಹಿ ತಿಂಡಿ ಹಾಗು ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಉಡುಪಿಯು ಆಡಳಿತಾತ್ಮಕವಾಗಿ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು ಕಾಲು ಶತಮಾನದ ಬಳಿಕ ಬಹು ಕಾಲದ ಕನಸು ನನಸಾಗಿದೆ. ಜಿಲ್ಲಾಸ್ಪತ್ರೆಯ ಬಹು ನಿರೀಕ್ಷಿತ ಬೇಡಿಕೆಗಳಾದ 1961 ರ ಮಂಗಳೂರು ಹಂಚಿನ ಕಟ್ಟಡ ನವೀಕೃತ ಗೊಳ್ಳುವುದರ ಜೊತೆಗೆ ಸಿಬ್ಬಂದಿಗಳ ಕೊರತೆ ಸಮಸ್ಯೆ ಕೂಡ ಪರಿಹಾರ ಕಾಣಲಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಮಾತನಾಡಿ ಓರ್ವ ಮಾದರಿ ಜನಪ್ರತಿನಿಧಿಯಾಗಿ  ತನ್ನ ಕ್ಷೇತ್ರದ ಜನತೆಯ ಸಮಸ್ಯೆಗಳ  ಅಧ್ಯಯನ ನಡೆಸಿ ಅದಕ್ಕೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ತೋರುವ ಪ್ರಾಮಾಣಿಕ ಬದ್ಧತೆಯನ್ನು ಶಾಸಕ ಕೆ ರಘುಪತಿ ಭಟ್ ಪ್ರದರ್ಶಿಸಿದ್ದಾರೆ.

2001 ರಿಂದ ಎರಡು ಬಾರಿ ಸಂಪು ಟದ ಆರ್ಥಿಕ ವಿಭಾಗದಲ್ಲಿ ತಿರಸ್ಕ್ರತ ಗೊಂಡ ನವೀಕೃತ ಜಿಲ್ಲಾಸ್ಪತ್ರೆ ಯೋಜನೆ ಯನ್ನು ಎದೆಗುಂದದೆ ಮತ್ತೆ ಹಳಿಗೆ ತರುವಲ್ಲಿ ಭಗೀರಥ ಪ್ರಯತ್ನವನ್ನು ಶಾಸಕರು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಸಂಘಟಿಸಿದ ಮಹೇಶ್ ಠಾಕೂರ್ ರವರು ಮಾತನಾಡಿ ಉಡುಪಿ ಜನತೆಯ ಬಹು ನಿರೀಕ್ಷಿತ ಜಿಲ್ಲಾಸ್ಪತ್ರೆ ನವೀಕರಣ ಯೋಜನೆ ಸಂಪುಟದಲ್ಲಿ ಅನುಮೋದನೆ ಗೊಳ್ಳಲು ಕಾರಣೀಭೂತರಾದ ಮುಖ್ಯ ಮಂತ್ರಿ ಯಡಿಯೂರಪ್ಪ, ಮಾಜಿ ಹಾಗು ಹಾಲಿ ಅರೋಗ್ಯ ಸಚಿವರಾದ ಶ್ರೀರಾಮುಲು ಮತ್ತು ಡಾ. ಸುಧಾಕರ್, ಹಾಗು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಉಡುಪಿ ಜಿಲ್ಲಾಸ್ಪತ್ರೆಯ ಮೂಳೆತಜ್ಞ ಡಾ. ಗಣೇಶ್ ನಾಯಕ್, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ದಿನೇಶ್ ಅಮೀನ್, ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಹಾಜರಿದ್ದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ನಿರೂಪಿಸಿ ದರು.

ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ- ಹರ್ಷ ವ್ಯಕ್ತಪಡಿಸಿದ ಶಾಸಕ ಕೆ. ರಘುಪತಿ ಭಟ್

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆ ಅಕ್ಟೋಬರ್ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವುದಕ್ಕೆ ಶಾಸಕ ಕೆ. ರಘುಪತಿ ಭಟ್ ಸಂತಸ ವ್ಯಕ್ತ ಪಡಿಸಿದ್ದಾರೆ. ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿದ್ದು, ಉಡುಪಿ ಜನತೆಯ ಬಹು ಬೇಡಿಕೆಯ ಈ ಯೋಜನೆಗೆ ಅನುಮೋದನೆ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ.

ರೂ. 115 ಕೋಟಿ ವೆಚ್ಚದಲ್ಲಿ ಕಟ್ಟಡ ಮತ್ತು 250 ಬೆಡ್ ಆಸ್ಪತ್ರೆಗೆ ಬೇಕಾದಷ್ಟು ಸಿಬ್ಬಂದಿ, ಪೀಠೋಪಕರಣಗಳು ಸೇರಿ ದಂತಹ ಈ ಬೃಹತ್ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಯನ್ನು ಸಲ್ಲಿಸುತ್ತೇನೆ. ಆದಷ್ಟು ಶೀಘ್ರವಾಗಿ ಈ ಯೋಜನೆ ಕಾರ್ಯಗತಗೊಳಿಸಿ ಜನತೆಗೆ ಅನೂಕೂಲ ಕಲ್ಪಿಸಲು ಪ್ರಯತ್ನಿ ಸುತ್ತೇನೆ.

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸಹಕರಿಸಿದ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾದ ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಸುಧಾಕರ್ ಹಾಗೂ ಆರ್ಥಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಉಡುಪಿಯ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

 
 
 
 
 
 
 
 
 

Leave a Reply