ಅವಕಾಶದ ಸದುಪಯೋಗ~ಪುತ್ತಿಗೆ ಶ್ರೀಪಾದರು.

ಭಗವಂತನು ಎಲ್ಲರಿಗೂ ಒಂದು ಉತ್ತಮ ಅವಕಾಶವನ್ನು ನೀಡುತ್ತಾನೆ. ಅದನ್ನು ‌ಸಂಶಯಪಡದೇ ಸದುಪಯೋಗ ಪಡಿಸಿಕೊಳ್ಳ ಬೇಕು. ಕಠಿಣವಾದ ಪರಿಶ್ರಮದಿಂದ ಯಶಸ್ಸನ್ನೂ ಪಡೆದುಕೊಳ್ಳಬೇಕು. ಧೈರ್ಯದಿಂದ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವ ಕಲೆಯನ್ನು ಬೆಳಿಸಿಕೊಳ್ಳಬೇಕು. ದೇವರು ಮತ್ತೆ ಮತ್ತೆ ಅವಕಾಶಗಳನ್ನು ನೀಡುವುದಿಲ್ಲ. ಆದ್ದರಿಂದ ಪ್ರಯತ್ನ ಶೀಲನಾಗಿರಬೇಕು. ಮೂಲೋಪಾಸನೆಯಿಂದ ಜೀವನದ ಯಶಸ್ಸನ್ನು ಪಡೆಯಬಹುದು. ನಮ್ಮ ಯಶಸ್ಸಿನ ಮೂಲವಾದ ತಂದೆ ತಾಯಿಗಳ ಸೇವೆ, ಗುರುಗಳ ಸೇವೆಯನ್ನು ಎಂದಿಗೂ ಬಿಡಬಾರದು ಎಂದು ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥಶ್ರೀಪಾದರು ಸಂದೇಶ ನೀಡಿದರು. 
ಮಂಗಳವಾರ ಪುತ್ತಿಗೆ  ಮೂಲಮಠದಲ್ಲಿ ಪರಮಪೂಜ್ಯ  ಶ್ರೀಪಾದರ ಷಷ್ಟಬ್ಧ ಸಮಾರಂಭದ ನಿಮಿತ್ತ ಮಾಣಿಯೂರು ಬಂಧುವರ್ಗ ಹಾಗೂ ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು ಮತ್ತು ಶ್ರೀ ಮಠದ ಸಿಬ್ಬಂದಿ ವರ್ಗ  ಆಯೋಜಿಸಿದ್ದ ಗುರುವಂದನೆಯನ್ನು  ಸ್ವೀಕರಿಸಿ ಆಶೀರ್ವಚನ ನೀಡಿದರು .
ಕಿರಿಯ ಶ್ರೀಪಾದರಾದ ಶ್ರೀಸುಶ್ರೀಂದ್ರತೀರ್ಥಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು.  ದಿವಾನರಾದ ಶ್ರೀ ಎಮ್ ನಾಗರಾಜ ಆಚಾರ್ಯ ಮತ್ತು ಶ್ರೀ ಎಮ್ ಪ್ರಸನ್ನ ಆಚಾರ್ಯ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ಓಂಪ್ರಕಾಶ್ ಭಟ್ ಇವರು  ಸಂಪಾದಿಸಿರುವ ಪೂಜ್ಯ ಶ್ರೀಪಾದರ ಕೃತಿಗಳ ಪರಿಚಯಾತ್ಮಕವಾದ  “ಕೃತಿ ಸ್ಮೃತಿ” ಪುಸ್ತಕವನ್ನು ಶ್ರೀಗಳಿಗೆ ಸಮರ್ಪಿ ಸಿದರು. ತಿರುಮಲ ಮೊದಲಾದ ಕ್ಷೇತ್ರಗಳ ಸನ್ನಿಧಿಯಿಂದ ತಂದೆ ಶೇಷಶಾಸ್ತ್ರ ಪ್ರಸಾದಗಳನ್ನು ನೀಡಲಾಯಿತು. ವಿದ್ವಾನ್ ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು.
 ಈ ಸಂದರ್ಭದಲ್ಲಿ ಶ್ರೀಮಠದಲ್ಲಿ ಜನ್ಮನಕ್ಷತ್ರ ಶಾಂತಿ, ನವಗ್ರಹ ಸಹಿತ ಶನಿಶಾಂತಿ, ಧನ್ವಂತರಿ ಹೋಮ, ವಿರಜಾಹೋಮ, ತಂತ್ರಸಾರ ಮಂತ್ರದ ಹೋಮಗಳ ಕಾರ್ಯಕ್ರಮಗಳೊಂದಿಗೆ ಸಂಸ್ಥಾನದ ದೇವರಿಗೆ ತುಳಸೀ ಲಕ್ಷಾರ್ಚನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 
 
 
 
 
 
 
 
 
 

Leave a Reply