ಉಡುಪಿ: ಬಸ್‌-ಟೆಂಪೋ ಡಿಕ್ಕಿ; ಇಬ್ಬರು ಗಂಭೀರ!

 ಗೂಡ್ಸ್ ಟೆಂಪೋ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ತೀವ್ರ ಗಾಯಗೊಂಡ ಘಟನೆ ಉಡುಪಿಯ ಶಿರಿಬೀಡುವಿನಲ್ಲಿ ನಡೆದಿದೆ.

ಕರಾವಳಿ ಬೈಪಾಸ್ ಕಡೆಯಿಂದ ಸಂಚರಿಸುತ್ತಿದ್ದ ಬಸ್‌ ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಹಿಂಬದಿಯಿಂದ ಬರ್ತಿದ್ದ ಗೂಡ್ಸ್‌ ಟೆಂಪೋ ನಿಯಂತ್ರಣ ಸಿಗದೇ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಹಾಗೂ ಮತ್ತೋರ್ವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply