Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಬೈಕ್-ಕಾರು ಅಪಘಾತ; ಮಧ್ವರಾಜ್ ಭಟ್ ನಿಧನ

ಉಡುಪಿ: ಮಣಿಪಾಲದ ಆರ್ಕಿಟೆಕ್ಟ್ ಡಿಪಾರ್ಟ್ಮೆಂಟ್ ನ ನಿವೃತ್ತ ಉದ್ಯೋಗಿ, ಕಟ್ಟಡಗಳ ವಿನ್ಯಾಸಕಾರ, ಪಾಜಕಕ್ಷೇತ್ರ ನಿವಾಸಿ ಮಧ್ವರಾಜ್ ಭಟ್ ರವರು (70) (ಇಂದು)ಮಂಗಳವಾರ ಬೆಳಗ್ಗಿನ ಜಾವ ನಿಧನರಾದರು.

ಆ.13ರಂದು ಪೆರ್ಡೂರು ಪಕ್ಕಾಲು, ಬಳಿ ನಡೆದ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಶ್ರಿಕೃಷ್ಣ ಮಠದ ಸುತ್ತು ಪೌಳಿಯ ನಿರ್ಮಾಣ ಕಾರ್ಯದಲ್ಲಿ, ರಾಜಾಂಗಣ,ಗೀತಾ ಮಂದಿರ ನಿರ್ಮಾಣ ಸಂಧರ್ಭ ವಿಶೇಷ ಮುತುವರ್ಜಿ ವಹಿಸಿದ್ದ ಇವರನ್ನು ಪೇಜಾವರ ಹಿರಿಯ ಶ್ರಿಗಳು ಶ್ರಿ ಕೃಷಾನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.ನೇಪಾಳ,ಗುಜರಾತ್ ನ ದ್ವಾರಕಾ,ದ.ಕ,ಉಡುಪಿ,ಬೆಂಗಳೂರು,ಕೋಲಾರ,ಕುಂಭಾಶಿ ಅಯ್ಯಪ್ಪ ಸ್ವಾಮಿ ದೇವಾಲಯ, ಸಹಿತ ಹಲವೆಡೆ ದೇವಸ್ಥಾನ ಮತ್ತು ಮಠಗಳ ಮರು ನಿರ್ಮಾಣದ ಕಾಮಗಾರಿಗೆ ನಕ್ಷೆ ಗಳನ್ನು ತಯಾರಿಸಿ ಕಟ್ಟಡಗಳ ನಿರ್ಮಾಣಕ್ಕೆ ರೂಪು ರೇಷೆಗಳನ್ನು ತಯಾರಿಸಿ ಕೊಡುತ್ತಿದ್ದರು. ಸಾತ್ವಿಕ ಸ್ವಭಾವದವರಾಗಿದ್ದು, ಜನಾನುರಾಗಿಯಾಗಿದ್ದ ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ ಸಹಿತ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.ಶ್ರೀಯುತರ ನಿಧನಕ್ಕೆ ಅಷ್ಟ ಮಠಗಳ ಶ್ರೀಗಳು,ಉಡುಪಿ ಶಾಸಕ ರಘುಪತಿ ಭಟ್,ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!