ಅಂಚೆ ಕಚೇರಿಗಳಲ್ಲಿ ಆಧಾರ್ ಅಭಿಯಾನ

ಸಾರ್ವಜನಿಕರಿಗೆ ಆಧಾರ್ ಸೇವೆಯ ಅಗತ್ಯತೆಯನ್ನು ಅರಿತು ಉಡುಪಿ ಅಂಚೆ ವಿಭಾಗವು ಅಕ್ಟೋಬರ್ 6,ಭಾನುವಾರದಂದು ಉಡುಪಿ ಅಂಚೆ ವಿಭಾಗದ ಕೆಳಗೆ ನಮೂದಿಸಿದ ಅಂಚೆ ಕಚೇರಿಗಳಲ್ಲಿ ಆಧಾರ್ ಅಭಿಯಾನವನ್ನು ಹಮ್ಮಿಕೊಂಡಿದೆ.

ಆ ದಿನದಂದು ಆಯ್ದ ಅಂಚೆ ಕಚೇರಿಗಳಲ್ಲಿ ಗರಿಷ್ಟ 150 ಆಧಾರ್ ನೋಂದಣಿ‌ ಹಾಗು ತಿದ್ದುಪಡಿ ಸೇವೆ ಲಭ್ಯವಿದ್ದು ಪ್ರತೀ‌ ಕಚೇರಿಯಲ್ಲಿ ಆ‌ ದಿನ ಬೆಳಿಗ್ಗೆ 8 ಗಂಟೆಯಿಂದ ಆಧಾರ್ ಅಭಿಯಾನ ಆರಂಭವಾಗುವುದು. ಆಸಕ್ತರು ಮುಂಗಡ ಟೋಕನ್ ಪಡೆದುಕೊಂಡು ನಿಗದಿತ ಸಮಯಕ್ಕೆ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಸಂಬಂಧಿತ ಸೇವೆಯನ್ನು‌ ಪಡೆದು ಕೊಳ್ಳಲು ವಿನಂತಿಸಲಾಗಿದೆ.

ಕೋವಿಡ್ 19 ಹರಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಿಕೊಂಡು ಕೌಂಟರಿನಲ್ಲಿ ಮುಗಿ ಬೀಳದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್, ಸ್ಯಾನಿಟೈಸರ್ ಉಪಯೋಗದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಆಧಾರ್ ಅಭಿಯಾನದ ಸದುಪಯೋಗ ಪಡೆದುಕೊಳ್ಳುವಂತೆ ಆಶಿಸಲಾಗಿದೆ.

ಉಡುಪಿ ಅಂಚೆ ವಿಭಾಗದಲ್ಲಿ ಆಧಾರ್ ಅಭಿಯಾನ ನಡೆಯುವ ಅಂಚೆ ಕಚೇರಿಗಳು..1. ಉಡುಪಿ ‌ಪ್ರಧಾನ ಅಂಚೆ ಕಚೇರಿ. 2. ಮಣಿಪಾಲ ಪ್ರಧಾನ ಅಂಚೆ ಕಚೇರಿ. 3. ಕುಂದಾಪುರ ಪ್ರಧಾನ ಅಂಚೆ ಕಚೇರಿ. 4. ಕಾಪು 5.ಬ್ರಹ್ಮಾವರ 6. ಉಚ್ಚಿಲ 7. ಉದ್ಯಾವರ 8 .ಕುಂಜಿಬೆಟ್ಟು 9. ಕ್ರೋಡಾಶ್ರಮ 10 ಶಂಕರಪುರ 11. ತಲ್ಲೂರು 12. ಪಡುಬಿದ್ರೆ 13. ಬಸ್ರೂರು 14. ಕೊಲ್ಲೂರು 15. ತ್ರಾಸಿ 16.ವಂಡ್ಸೆ 17.ಬಾರ್ಕೂರು 18.ಕೋಟೇಶ್ವರ 19.ಶಂಕರ ನಾರಾಯಣ 20. ಸಿದ್ದಾಪುರ 21.ಕಂಬದಕೋಣೆ 22.ಸಾಲಿಗ್ರಾಮ 23.ಕೊಕ್ಕರ್ಣೆ 24. ಪೆರ್ಡೂರು 25. ಹಿರಿಯಡ್ಕ

ಅಲ್ಲದೆ ಉಳಿದ ಅಂಚೆ ಕಚೇರಿಗಳಾದ ಕೆಮ್ಮಣ್ಣು, ಪಕ೯ಳ, ಶಿವ೯, ಅಂಬಲಪಾಡಿ , ಮಿಷನ್ ಕಾಂಪ್Oಡು, ಬೈಂದೂರು ಶೀರೂರು, ಹಂಗಾರ ಕಟ್ಟ, ಸಾಸ್ತಾನ, ಪಿಲಾರು, ಶಂಕರಪುರ, ಹೆಜಮಾಡಿ, ಉಡುಪಿ ಕೋಟ್೯ , ಎಮಾ೯ಳು, ಮತ್ತು ಗಂಗೊಳ್ಳಿ ಅಂಚೆ ಕಚೇರಿಗಳಲ್ಲಿಯೂ ಕೂಡಾ ಆಧಾರ್ ನೋಂದಣಿ‌ ಹಾಗು ತಿದ್ದುಪಡಿ ಸೇವೆ ಲಭ್ಯವಿದೆ  ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ನವೀನ್ ಚಂದರ್ ರವರು‌ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply