ಕಂಟೈನ್ ಮೆಂಟ್ ವಲಯಗಳಲ್ಲಿ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು. 1) ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಸೆಪ್ಟಂಬರ್ 30 ರ ವರೆಗೆ ಇರುತ್ತದೆ. 2) ವೈದ್ಯಕೀಯ ತುರ್ತು ಸೇವೆಗಳು ಮತ್ತು ಅವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಳನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಇವುಗಳ ಹೊರತು ಕಂಟೈನ್ ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.
1) ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು 30ನೇ ಸೆಪ್ಟೆಂಬರ್ 2020 ರವರೆಗೆ ವಿದ್ಯಾರ್ಥಿಗಳು ಮತ್ತು ನಿಯತ ತರಗತಿ ಚಟುವಟಿಕೆಗಳಿಗೆ ಮುಚ್ಚಿರುವುದು ಮುಂದುವರಿಯಲಿದೆ. ಆದರೂ, ಈ ಕೆಳಕಂಡ ಚಟುವಟಿಕೆಗಳಿಗೆಅನುಮತಿ ನೀಡಲಾಗುವುದು. ಆನ್‌ಲೈನ್/ದೂರಶಿಕ್ಷಣ ಕಲಿಕೆಗಳಿಗೆ ಅನುಮತಿ ಮುಂದುವರಿಸಬೇಕು ಮತ್ತು ಪ್ರೋತ್ಸಾಹಿಸಲಾಗುವುದು. 20ನೇ ಸೆಪ್ಟೆಂಬರ್ 2020 ರಿಂದ ಜಾರಿಗೆ ಬರುವಂತೆ ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ ಆನ್‌ಲೈನ್ ಬೋಧನೆ/ ಟೆಲಿ ಸಮಾಲೋಚನೆ ಹಾಗೂ ಕೋವಿಡ್-19 ಕೆಲ ನಿರ್ಬಂಧಗಳಿಗೆ ಸಡಿಲ- ಒಮ್ಮೆಗೆ ಶಾಲೆಗಳಿಗೆ ಶೇ. 50%ರವರಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಲು ಅನುಮತಿಸಲಾಗುವುದು.
09 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಕಂಟೈನ್ ಮೆಂಟ್ ವಲಯಗಳ ಹೂರಗಿನ ಪ್ರದೇಶಗಳಲ್ಲಿ ಮಾತ್ರ ಸ್ವಇಚ್ಚೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಬಹುದು. ಇದು ಅವರ ತಂದೆ-ತಾಯಿಗಳ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ ಮತ್ತು ಇದಕ್ಕೆ 21ನೇ ಸೆಪ್ಟೆಂಬರ್ 2020 ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುವುದು. ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್‌ನಲ್ಲಿ ಅಥವಾ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಇತರ ಮಂತ್ರಾಲಯಗಳಲ್ಲಿ /ಸಚಿವಾಲಯಗಳಲ್ಲಿ ನೋಂದಾಯಿಸಿಕೊಂಡ ಅಲ್ಪಾವಧಿ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ ತರಬೇತಿಯನ್ನು ಪಡೆಯುವುದಕ್ಕೆ ಅನುಮತಿ ನೀಡಲಾಗುವುದು.
3) ಸಿನೆಮಾ ಮಂದಿರಗಳು. ಈಜುಕೊಳಗಳು, ಮನೋರಂಜನಾ ಉದ್ಯಾನವನಗಳು, ರಂಗಮ ದಿರಗಳು ಮತ್ತು ಅಂತಹುದೇ ಸ್ಥಳಗಳು ಮುಚ್ಚಿರಲಿವೆ . ಆದರೂ 21 ನೇ ಸೆಪ್ಟೆಂಬರ್ 2020 ರಿಂದ ಜಾರಿಗೆ ಬರುವಂತೆ ಬಯಲು ಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುವುದು. 4)ಗೃಹ ವ್ಯವಹಾರ ಮಂತ್ರಾಲಯವು ಅನುಮತಿಸಿದಂತೆ ಹೊರತುಪಡಿಸಿ ಪ್ರಯಾಣಿಕರ ಅಂತರ- ರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಇರಲಿದೆ.
1) ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ದಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು ಮತ್ತು ಎಲ್ಲಾ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು. (ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು). ಉಲ್ಲಂಘನೆಗಾಗಿ ನಿಗದಿತ ಅಧಿಕಾರಿಗಳು ನಿಗದಿಪಡಿಸಿದ ದಂಡವನ್ನು ವಿಧಿಸುವುದು/ಕಾನೂನು ಕ್ರಮ ವಹಿಸುವುದು. ಗ್ರಾಹಕರಲ್ಲಿ ದೈಹಿಕ ಅಂತರ ಇರುವುದನ್ನು ಅಂಗಡಿಗಳು ಖಚಿತಪಡಿಸಿಕೊಳ್ಳುವುದು.
2) ಸ್ದಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕಸ್ದಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಿದೆ ಹಾಗೂ ಇದರ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡವನ್ನು ವಿಧಿಸಲಾಗುವುದು. 3) 65 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು, ಅಸ್ವಸ್ಥರು,ತುರ್ತು ವೈದ್ಯಕೀಯ ಕಾರಣ ಹೊರತ್ತು ಪಡಿಸಿ ಮನೆಯಿಂದ ಹೊರಗೆ ಬರುವುದು ಸೂಕ್ತವಲ್ಲ.
ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು : (work from Home) ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸಮಾಡುವ ಪದ್ದತಿಯನ್ನು ಅನುಸರಿಸಬೇಕು.
ಕೆಲಸದಲ್ಲಿ ಪಾಳಿಯ ಪದ್ಧತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಅಂಗಡಿಗಳಲ್ಲಿ , ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ಧತಿಯನ್ನು ಅನುಸರಿಸುವುದು.ಸ್ಕ್ರೀನಿಂಗ್ ಮತ್ತು ನೈರ್ಮಲ್ಯ: ಎಲ್ಲಾ ಸಾಮಾನ್ಯ ಪ್ರದೇಶಗಳ್ಲಲಿ, ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ , ಕೈ ತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್ ಗೆ ಅವಕಾಶ ಕಲ್ಪಿಸುವುದು. ನಿಯಮಿತ ಸ್ಯಾನಿಟೈಸೇಷನ್: ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ಅಂಶಗಳಿಗೆ ಆಗಾಗ್ಗೆ ನೈರ್ಮಲ್ಯೀಕರಣ ಮಾಡತಕ್ಕದ್ದು. ಸಾಮಾಜಿಕ ಅಂತರ: ಕೆಲಸದ ಸ್ಥಳದಲ್ಲಿ ವ್ಯಕ್ತಿಗಳ ನಡುವೆ, ಪಾಳಿಗಳ ನಡುವೆ, ಊಟದ ವಿರಾಮಮೊದಲಾವುದಗಳಲ್ಲಿ ಎಲ್ಲಾ ವ್ಯಕ್ತಿಗಳು ಸಾಕಷ್ಟು ಅಂತರಗಳನ್ನು ಕಾಯ್ದುಕೊಳ್ಳುವುದು. ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು Disaster Management Act 2005 , ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು IPC ಸೆಕ್ಷನ್ 188 ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.






