ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ: ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ

ಉಡುಪಿ: ಕೊರೋನಾದಲ್ಲಿ ಭ್ರಷ್ಟಚಾರ ನಡೆದಿದ್ದರೆ ದಾಖಲೆ ಕೊಡಿ, ಅನಾವಶ್ಯಕ ಆರೋಪ ಮಾಡಿದರೆ ಸುಮ್ಮನಿರಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ, ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆಂಬ ವರದಿಗೆ ಉಡುಪಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕ್ರಮಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷರ ಜೊತೆ ಮಾತನಾಡಿದ್ದೇನೆಂದು ಉಡುಪಿ ಜಿಲ್ಲಾಧಿಕಾರಿ ತಮ್ಮ ಸಾಮಾಜಿಕ ಜಾಲ ತಾಣದ ಮೂಲಕ ತಿಳಿಸಿದ್ದಾರೆ. ಇತ್ತೀಚೆಗೆ ಕೊರೋನಾ ವಿಚಾರದಲ್ಲಿ ದಾಖಲೆಗಳಿಲ್ಲದೆ ಅಧಿಕಾರಿಗಳ ವಿರುದ್ದ ಭ್ರಷ್ಟಚಾರದ ಆರೋಪ ಮಾಡಿರುವವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಡಿಸಿ ಎಚ್ಚರಿಕೆ ನೀಡಿದ್ದರು.

ಆದರೆ ಖಾಸಗಿ ವೆಬ್‌ಸೈಟ್‌ವೊಂದು ಜಿಲ್ಲಾಧಿ ಕಾರಿ ಅವರು ಕಾಂಗ್ರೆಸ್ ಪಕ್ಷದ ವಿರುದ್ದ ಹೇಳಿಕೆ ನೀಡಿದ್ದರು ಎಂಬ ವರದಿ ಪ್ರಕಟಿ ಸಿದ್ದರು. ಈ ಸುಳ್ಳು ವರದಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣ ವಾಗಿತ್ತು. ಇದಕ್ಕೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುವ ಕಿಡಿಗೆಡಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದೇನೆ, ನಾನು ಕಾಂಗ್ರೆಸ್, ಬಿಜೆಪಿ ಹೇಳಿಲ್ಲ, ದಾಖಲೆ ಇಲ್ಲದೆ ಮಾತನಾಡಿದವರಿಗೆ ಎಚ್ಚರಿಕೆ ನೀಡಿ ದ್ದೇನೆ. ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ಕಾಂಗ್ರೆಸ್ ರೊಚ್ಚಿಗೆಳಳಿ ಎಂಬಂತಿದೆ, ಇದರ ಬಗ್ಗೆ ತನಿಖೆ ಮಾಡಲು ಎಸ್ಪಿಗೆ ಹೇಳಿದ್ದಾಗಿ karavalixpress ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

 
 
 
 
 
 
 
 
 

Leave a Reply