ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆ

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ ಇದರ ವತಿಯಿಂದ ಉಡುಪಿ ಜಿಲ್ಲಾದ್ಯಾಂತ ಕಬ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ರೋವರ್ಸ್ ರೇಜರ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಬಂಧುಗಳು ಸಂಸ್ಥೆ ಯ ಪದಾಧಿಕಾರಿಗಳು ಎಪ್ಪತ್ತನಾಲ್ಕನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿನೂತವಾಗಿ ಆಚರಿಸಿದರು.

ಜಿಲ್ಲಾ ಸಂಸ್ಥೆಯ ಅಧೀನದಲ್ಲಿ ಬರುವ ಬೈಂದೂರು, ಕುಂದಾಪುರ ,ಬ್ರಹ್ಮಾವರ , ಕಲ್ಯಾಣಪುರ, ಕಾಪು, ಉಡುಪಿ, ಕಾರ್ಕಳ ಸ್ಥಳೀಯ ಸಂಸ್ಥೆಗಳಲ್ಲಿ ಸ್ಕೌಟ್ ಗೈಡ್ಸ್ ಚಳುವಳಿಯ ಎಲ್ಲಾ ವಿದ್ಯಾರ್ಥಿಗಳುಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಮನೆಗಳಲ್ಲಿ ಭಾರತ ಮಾತೆಯ ರಂಗೋಲಿ ರಚಿಸಿ,  ತ್ರಿವರ್ಣವನ್ನು ಅರಳಿಸಿ ರಾಷ್ಟ್ರ ಗೀತೆಯನ್ನು ಹಾಡಿ ರಾಷ್ಟ್ರ ನಾಯಕರ  ಹಾಗೂ ಸ್ಥಳೀಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ್ನು ಪರಿಚಯಿಸಿ ಮನೆಯ ಬಂವು ಬಾಂಧವರೆಲ್ಲರೂ ಕೋವಿಡ್ 19 ಸಂದರ್ಭದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ನೆರೆಯ ಮನೆಗಳ ಸದ‌ಸ್ಯರಿಗೆ ತಾವೇ ಸಿದ್ಧ ಪಡಿಸಿದ ಮಾಸ್ಕ್ ನ್ನು ಉಚಿತವಾಗಿ ನೀಡಿ ಕೊರೋನಾ ಜಾಗೃತಿಯನ್ನು ಮೂಡಿಸಿದರು ಇದೇ ಸಂದರ್ಭದಲ್ಲಿ ರಾಜ್ಯ ಮುಖ್ಯ ಆಯುಕ್ತರು ಪಿಜಿಆರ್ ಸಿಂಧ್ಯಾ ಇವರು ಹಾಗೂ  ಜಿಲ್ಲಾ ಮುಖ್ಯ ಆಯುಕ್ತ ರಾದ ಶ್ರೀಮತಿ ಶಾಂತಾ ವಿ.ಆಚಾರ್ಯ ಇವರು ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು.  ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಭ್ರಮ ದ ಆಚರಣೆಯ ಭಾವಚಿತ್ರ ಗಳನ್ನು ವಿಡಿಯೋ ತುಣುಕುಗಳನ್ನು ರಾಜ್ಯ ಸಂಸ್ಥೆಯು ನೀಡಿದ ಲಿಂಕ್ ಅಪ್ ಲೋಡ್ ಮಾಡಿ ಇ ಪ್ರಮಾಣಪತ್ರವನ್ನು  ಪಡೆಯಲಿದ್ದಾರೆ ಎಂದು ರಾಜ್ಯ ಸಂಸ್ಥೆಯು  ಸೂಚಿಸಿದೆ.
 
 
 
 
 
 
 
 
 

Leave a Reply