ವಿವಿಧೆಡೆ ಶೀರೂರುಶ್ರೀ ಆರಾಧನೆ

ವಿವಿಧೆಡೆ ಶೀರೂರುಶ್ರೀ ಆರಾಧನೆ
ಉಡುಪಿ: ಮೂರು ಪರ್ಯಾಯ ನಡೆಸಿ, ಸುಮಾರು 5 ದಶಕಗಳ ಕಾಲ ಉಡುಪಿ ಶ್ರೀಕೃಷ್ಣ ಪೂಜೆ ಸಲ್ಲಿಸಿದ್ದ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ದ್ವಿತೀಯ ಆರಾಧನೆ ಸೋಮವಾರ ವಿವಿಧೆಡೆಗಳಲ್ಲಿ ನಡೆಯಿತು.

ಪುನರೂರು
ಶೀರೂರು ಶ್ರೀಪಾದರ ಪೂರ್ವಾಶ್ರಮದ ಮೂಲದೇವತಾ ಸನ್ನಿಧಾನವಾದ ಪುನರೂರು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಕುಟುಂಬಿಕರ ಉಪಸ್ಥಿತಿಯಲ್ಲಿ ಶ್ರೀ ವಿಶ್ವನಾಥ ದೇವರಿಗೆ ದೇವಳದ ಪ್ರಧಾನ ಅರ್ಚಕ ಗುರುಮೂರ್ತಿ ಅವರು ಏಕಾದಶ ರುದ್ರಾಭಿಷೇಕ ಸಹಿತ ಮಹಾಪೂಜೆ ಹಾಗೂ ವಿದ್ವಾಂಸ ಕಡಂದಲೆ ಅನಂತಕೃಷ್ಣಾಚಾರ್ಯ ಪವಮಾನ ಹೋಮ ನಡೆಸಿದರು. ಶೀರೂರು ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ವಿವಿಧ ತೀರ್ಥಕ್ಷೇತ್ರಗಳ ಪುಣ್ಯಜಲದಿಂದ ಕಲಶಾಭಿಷೇಕ ನಡೆಯಿತು.

ಪುನರೂರು ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟೇಲ ವಾಸುದೇವ ರಾವ್, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಶಿಮಂತೂರು ದೇವಾಲಯದ ಪ್ರಧಾನ ಅರ್ಚಕ ಪುರುಷೋತ್ತಮ ಆಚಾರ್, ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಪಿ. ವಾದಿರಾಜ ಆಚಾರ್ಯ, ಪಿ. ಶ್ರೀನಿವಾಸ ಆಚಾರ್ಯ, ಪಿ. ಲಾತವ್ಯ ಆಚಾರ್ಯ ಮತ್ತು ಪಿ. ವ್ರಜನಾಥ ಆಚಾರ್ಯ, ಬಂಧುಗಳಾದ ಪ್ರಹ್ಲಾದ ಆಚಾರ್ಯ ಸೊಂಡೂರು, ಅಕ್ಷೋಭ್ಯ ಆಚಾರ್ಯ, ಅರ್ಜುನ ಆಚಾರ್ಯ, ಹರೀಶ ಜೋಯಿಸ್, ಲಕ್ಷ್ಮೀಶ ಜೋಯಿಸ್, ಡಾ. ವ್ಯಾಸರಾಜ ತಂತ್ರಿ ಹಾಗೂ ಪುನರೂರು ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

ಕೇಮಾರು
ಶ್ರೀಗಳ ಸ್ಮರಣಾರ್ಥ ಕೇಮಾರು ಸಾಂದೀಪನೀ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ತಮ್ಮ ಉಪಾಸ್ಯದೇವರಾದ ಶ್ರೀ ವರದ ನಾರಾಯಣ ಹಾಗೂ ಶಾಲಗ್ರಾಮ ಸನ್ನಿಧಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಶಿಮಂತೂರು
ಶೀರೂರು ಶ್ರೀಪಾದರ ಆರಾಧನೆ ಪ್ರಯುಕ್ತ ಶಿಮಂತೂರು ಶ್ರೀ ಆದಿಜನಾರ್ದನ ದೇವರಿಗೆ ಪವಮಾನ ಕಲಶಾಭಿಷೇಕ ಹಮ್ಮಿಕೊಳ್ಳಲಾಗಿತ್ತು.

ಮಡಾಮಕ್ಕಿ
ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಹುಟ್ಟೂರಾದ ಮಡಾಮಕ್ಕಿಯಲ್ಲಿ ಕೃಷ್ಣಮೂರ್ತಿ ಮಂಜ ಹಾಗೂ ಅನಂತ ತಂತ್ರಿ ಮಡಾಮಕ್ಕಿ ನೇತೃತ್ವದಲ್ಲಿ ಗ್ರಾಮದೇವರಿಗೆ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ನಡೆಸಲಾಯಿತು

 

 
 
 
 
 
 
 
 
 
 
 

Leave a Reply