Janardhan Kodavoor/ Team KaravaliXpress
32.6 C
Udupi
Sunday, February 5, 2023
Sathyanatha Stores Brahmavara

ರಘುಪತಿ ಭಟ್ ರವರಿಂದ ಪರಿಹಾರ ಧನ ಚೆಕ್ ವಿತರಣೆ

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 4 ಕುಟುಂಬಗಳಿಗೆ ಇಂದು ಶಾಸಕ ಕೆ. ರಘುಪತಿ ಭಟ್ ರವರು ಬ್ರಹ್ಮಾವರದ ಶಾಸಕರ ಕಚೇರಿ ಯಲ್ಲಿ ಪರಿಹಾರ ಧನದ ಚೆಕ್ ವಿತರಿಸಿದರು.

ವಾರಂಬಳ್ಳಿ ಗ್ರಾಮದ ನಿವಾಸಿ ವಾರಿಜಾ ರವರಿಗೆ ರೂ. 95,100, ಚಾಂತಾರು ಗ್ರಾಮದ ನಿವಾಸಿ ವನಜಾ ರವರಿಗೆ ರೂ. 95,100, ನೀಲಾವರ ಪಂಚಾಯತ್ ನಿವಾಸಿ ಪ್ರೇಮ ರವರಿಗೆ ರೂ. 95,100, 34ನೇ ಕುಡಿ ಗ್ರಾಮದ ನಿವಾಸಿ ಗಿರಿಜಾ ಪೂಜಾರ್ತಿ ಯವ ರಿಗೆ ರೂ. 95,100 ಗಳ ಚೆಕ್ ಸೇರಿ ದಂತೆ ಒಟ್ಟು ರೂ. 3,80,400 ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಬ್ರಹ್ಮಾವರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಂದ್ರ ಕುಮಾರ್, ನೀಲಾವರ ಪಂಚಾಯತ್ ಮಾಜಿ ಸದಸ್ಯರು ರಾಮ್ ದಾಸ್ ಅಮೀನ್, ಗುರುರಾಜ್ ಮಕ್ಕಿತ್ತಾಯ ಹಾಗೂ ಕಂದಾಯ ನಿರೀಕ್ಷ ಕರಾದ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತ ರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!