Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ಮಾರಿಯಮ್ಮ ಸನ್ನಿಧಿ ಕಟ್ಟ​ದಬುಡ ಕಲ್ಮಾಡಿ.

ಮಹತೋಭಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ​ಭಗವತಿ ಮಾರಿಯಮ್ಮ ಸನ್ನಿಧಿ, ಕಟ್ಟ​ದಬುಡ, ಕಲ್ಮಾಡಿ, ಇದರ ಆಷಾಢ ಮಾಸದ ಮಾರಿ ಪೂಜೆಯು ದಿನಾಂಕ 29-7-2020ನೇ ಬುಧವಾರ ನಡೆಯಲಿದೆ. 

ಇಂದು ಒಳಗಿನ ಮಾರಿಪೂಜೆಯ ಸಲುವಾಗಿ  ಶ್ರೀದೇವಳದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ  ಚಂಡಿಕಾ ಹೋಮ ಸಂಪನ್ನಗೊಂಡಿತು.  ನಂತರ  ಅನ್ನ  ಸಂತರ್ಪಣೆ ಜರಗಿತು.

ಈ ಸಂಧರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ,ಸದಸ್ಯ ಜನಾರ್ದನ್  ಕೊಡವೂರು, ಕೃಷ್ಣಮೂರ್ತಿ ಭಟ್,    ಭಗವತಿ ಮಾರಿಯಮ್ಮ​ ​ಆಡಳಿತ ಸಮಿತಿ ಅಧ್ಯಕ್ಷ  ಕೆ.ಕಾಳು ಶೇರಿಗಾರ್ , ವಿಜಯ ಎಂ. ಬಂಗೇರ , ಪ್ರಕಾಶ್ ಕರ್ಕೇರಾ, ಸದಾಶಿವ ಕರ್ಕೇರಾ , ರಾಘವೇಂದ್ರ ರಾವ್ , ಉಮೇಶ್ ರಾವ್, ರಂಜಿತ್ ಕೊಡವೂರು ಮೊದಲಾದವರು​ ​ಉಪಸ್ಥಿತರಿದ್ದರು 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!