ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ತುಳು ನಾಡ ಧೈವಾರಾಧಕರ ಸಹ ಕಾರಿ ಒಕ್ಕೂಟದಿಂದ ಮನವಿ

ತುಳುನಾಡ ಧೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಇಂದು ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮನವಿಯನ್ನು ಕೊಡಲಾ ಯಿತು.

ಸರ್ಕಾರ ಮಟ್ಟದಲ್ಲಿ ಇಷ್ಟರತನಕ ಯಾವುದೇ ಕೋರನಾ ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ವಿಶೇಷ ಪ್ಯಾಕೇಜನ್ನು ಬಿಡುಗಡೆ ಮಾಡಲಿಲ್ಲ ಹಾಗೂ ತಕ್ಕಮಟ್ಟಿಗೆ ಕರಾವಳಿ ನಡೆಯುವ 150 ಜನ ಸೀಮಿತಕ್ಕೆ ದೈವಾರಾಧನೆಗೆ ಸರ್ಕಾರದಿಂದ ಅನುಮತಿ ಬರಲಿಲ್ಲ.

ರಾಜಕೀಯ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಧಿ ಕಾರಿ ಯವರಿಗೆ ಮನವಿ ಕೊಟ್ಟರು ನಮಗೆ ಸ್ಪಂದನೆ ಸಿಗಲಿಲ್ಲ. ಅದರಿಂದ ನಿಮ್ಮ ಮುಖಾಂತರ ವಿರೋಧ ಪಕ್ಷದ ವತಿಯಿಂದ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿಸಿ ಕೊಂಡಿದ್ದಾರೆ. ಮನವಿಯನ್ನು ಸ್ವೀಕರಿಸಿದ ಮಾಜಿ ಶಾಸಕ ಪ್ರಮೋದ್ ಮಧ್ವ ರಾಜ್ ನಿಮ್ಮೆಲ್ಲರ ಸಮಸ್ಯೆಯನ್ನು ಮುಖ್ಯ ಮಂತ್ರಿ ಹಾಗೂ ಇದಕ್ಕೆ ಸಂಬಂಧ ಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲ ವಾಗಿ ನಾನಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾ ಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷ ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಕಾಪು ಘಟಕ ದ ಅಧ್ಯಕ್ಷ ಯಶೋಧರ್ ಶೆಟ್ಟಿ ಹಾಗೂ ದಯೆಶಾ ಕೊಟ್ಯಾನ್, ಸುನಿಲ್ ಕುಮಾರ್, ಸಂತೋಷ್ ದೇವಾಡಿಗ, ನಿತ್ಯಾನಂದ, ಸೂರ್ಯಕಾಂತಾ ದೇವಾಡಿಗ ಹಾಗು ರಕ್ಷಿತ್ ಉಪಸ್ಥಿತರಿದ್ದರು.

Leave a Reply