ಮಂಗಳೂರು ಗಲಭೆ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆ ಪೂರ್ಣ

ಮಂಗಳೂರು: ನಗರದಲ್ಲಿ ಕಳೆದ ಡಿ.19 ರಂದು ಸಿಎಎ ವಿರೋಧಿಸುವ ನೆಪದಲ್ಲಿ ನಡೆದ ಪ್ರತಿಭಟನೆ, ಗಲಭೆ ಪ್ರಕರಣದ ಕುರಿತ ಮ್ಯಾಜಿಸ್ಟೀರಿಯಲ್ ತನಿಖೆ ಮಂಗಳವಾರ ಪೂರ್ಣಗೊಂಡಿದೆ.


ಮ್ಯಾಜಿಸ್ಟ್ರೇಟ್ ತನಿಖಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಂಗಳವಾರ ನಗರದ ಎಸಿ ನ್ಯಾಯಾಲಯ ದಲ್ಲಿ ಅಂತಿಮ ವಿಚಾರಣೆ ನಡೆಸಿದ್ದು, 45 ಮಂದಿ ನಾಗರಿಕರು, 13 ಪೊಲೀಸ್ ಸಿಬ್ಬಂದಿ, ನಿರ್ಗಮಿತ ದ.ಕ. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರ ಹೇಳಿಕೆಗಳನ್ನು ದಾಖಲಿ ಸಿದ್ದಾರೆ.

ಆಗಿನ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಘಟನೆಯ ಬಗ್ಗೆ ತನ್ನ ಹೇಳಿಕೆ ನೀಡಿದ್ದಾರೆ.

ಈ ಕುರಿತ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸೆ.20 ಅಂತಿಮ ದಿನವಾಗಿದ್ದು, ಅಷ್ಟರೊಳಗೆ ವರದಿ ಸಲ್ಲಿಸುವ ಸಾಧ್ಯತೆ ಯಿದೆ.

Leave a Reply