Janardhan Kodavoor/ Team KaravaliXpress
25.6 C
Udupi
Wednesday, September 28, 2022
Sathyanatha Stores Brahmavara

ಗೋವಿಗಾಗಿ ಮೇವು ಅಭಿಯಾನದ ಪೇಸ್ಬುಕ್ ಪೇಜ್ ಲೋಕಾರ್ಪಣೆ

ಕಾಮದೇನು ಗೋಸೇವಾ ಸಮಿತಿ ಮಂದಾರ್ತಿ ಇವರ ನೇತ್ರತ್ವದಲ್ಲಿ ಅನಾಥ ಗೋವುಗಳ ರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ವಿವಿಧ ಸಂಘಸಂಸ್ಥೆಗಳ ಮೂಲಕ ಮೇವನ್ನು ನೀಡಲು ಆರಂಭ ಗೊಂಡಿರುವ ಗೋವಿಗಾಗಿ ಮೇವು ಅಭಿ ಯಾನದ ಅಧಿಕೃತ ಪೇಸ್ಬುಕ್ ಪೇಜ್ ನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಬಂದರು, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಲೋಕಾರ್ಪಣೆ ಮಾಡಿದರು. ‌

ಗೋವಿಗಾಗಿ ಮೇವು ಅಭಿಯಾನ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಉದ್ದ ಗಲಕ್ಕೂ ವ್ಯಾಪಿಸಲಿ ಎಂದರು.

ಗೋವಿಗಾಗಿ ಮೇವು ಅಭಿಯಾನದ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕ ಮಾತನಾಡಿ ಫೇಸ್ಬುಕ್ ಮೂಲಕ ರಾಜ್ಯಾದ್ಯಂತ ಸಾರ್ವಜನಿ ಕರನ್ನ, ಸಂಘ ಸಂಸ್ಥೆಗಳನ್ಮ ಈ ಅಭಿ ಯಾನಕ್ಕೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ಗೋವಿಂದ ಪೂಜಾರಿ, ಬೈಂದೂರು ತಾಲೂಕು ಪಂಚಾಯತ್ ಅದ್ಯಕ್ಷ ಮಹೇಶ್ ಪೂಜಾರಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!