Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಗೆದ್ದವರು ಮಾತ್ರವಲ್ಲ, ಸೋತವರೂ ನಾಯಕರು ~ ಪ್ರಮೋದ್ ಮಧ್ವರಾಜ್

ಬ್ರಹ್ಮಾವರ: ಶನಿವಾರ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆ ಬ್ಲಾಕ್ ಕಚೇರಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯವಾಗಿ ಆಯ್ಕೆ ಆಗುವ ಸಾಮರ್ಥ್ಯ ವಿರುವಂತ ವ್ಯಕ್ತಿಗಳನ್ನೇ ಅಭ್ಯರ್ಥಿಗಳನ್ನಾಗಿ ಮಾಡಬೇಕೇ ಹೊರತು ಪಕ್ಷದ ಮುಖಂಡರು ಆಯ್ಕೆ ಮಾಡುವಂತೆ ಆಗಬಾರದು. ಯುವ ಅಭ್ಯರ್ಥಿಗಳಿಗೆ ಈ ಬಾರಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಚುನಾವಣೆ ಜನರ ತೀರ್ಮಾನವಾಗಿದ್ದು ಗೆದ್ದವರು ಮಾತ್ರ ನಾಯಕರಲ್ಲ, ಸೋತವರೂ ಕೂಡಾ ನಾಯಕರು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿತ್ತು.ಆದರೆ ಈಗ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಬಿಡುಗಡೆ ಆಗುತ್ತಿಲ್ಲದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ನೋವನ್ನು ಅನುಭವಿಸಿದವರಿಗೆ ಯಶಸ್ಸು ಸಿಗುತ್ತಿದೆ. ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದ್ದು ಕಾರ್ಯಕರ್ತರು ಎಂದು ಹೇಳಿದ್ದಾರೆ.

ತನ್ನ ಅವಧಿಯಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಅನುದಾನ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ತಯಾರಾಗಬೇಕಿದೆ. ತಾನು ಕೂಡ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಕೆಪಿಸಿಸಿ ವಕ್ತಾರ ಪುರುಷೋತ್ತಮ್ ಚಿತ್ರಪಾಡಿ, ಮುಖಂಡರಾದ ಯತೀಶ್ ಕರ್ಕೇರಾ, ರಮೇಶ್ ಕಾಂಚನ್, ವೆರೋನಿಕಾ ಕರ್ನೆಲಿಯೊ, ಮುರಳಿ ಶೆಟ್ಟಿ, ದಿನಕರ ಹೇರೂರು, ಹರೀಶ್ ಶೆಟ್ಟಿ, ಡಾ ಸುನೀತಾ ಶೆಟ್ಟಿ, ರಮೇಶ್ ಶೆಟ್ಟಿ ಹಾವಂಜೆ, ವಿಜಯ ಹೆಗ್ಡೆ, ಗೋಪಿ ನಾಯಕ್, ರಾಜೇಶ್ ಕುಮ್ರಗೋಡು, ಅಶೋಕ್ ಶೆ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್, ವಿಘ್ನೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸೂರ್ಯ ಸಾಲಿಯಾನ್ ಸರಸ್ವತಿ, ನಿತ್ಯಾನಂದ ಕೆಮ್ಮಣ್ಣು, ನಿತ್ಯಾನಂದ ಬಿ ಆರ್, ಸಂಪತ್ , ತಾಜುದ್ದೀನ್, ಬ್ಯಾಪ್ಟಿಸ್ಟ್, ಸತೀಶ್ ಕಲ್ಯಾಣಪುರ, ಮೆಲ್ವಿನ್, ಹಮೀದ್, ರೆಹಮಾನ್, ಪ್ರಶಾಂತ್ ಸುವರ್ಣ, ಸತೀಶ್, ಫ್ರ್ಯಾಂಕಿ, ಕುಮಾರ್, ದಿನೇಶ್ ಪೂಜಾರಿ, ಸದಾಶಿವ ನಾಯಕ್, ರಮೇಶ್ ಕರ್ಕೇರ, ನರಸಿಂಹ ಪೂಜಾರಿ, ಉಮೇಶ್ ಶೆಟ್ಟಿ, ಶೀನ ಪೂಜಾರಿ, ಅಲ್ತಾಫ್, ಶ್ರೀನಿವಾಸ್ ಗುಲ್ವಾಡಿ, ಉಪೇಂದ್ರ ಗಾಣಿಗ, ಉಮೇಶ್ ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!