ಕುಂದಾಪುರ : ಕೊಡೇರಿ ದೋಣಿ ದುರಂತದಲ್ಲಿ ನಾಪತ್ತೆಯಾದ ಮೀನುಗಾರರ ನಾಲ್ಕೂ ಮೃತ ದೇಹಗಳು ಪತ್ತೆಯಾಗಿವೆ . ಹುಡುಕಾಟದಲ್ಲಿ ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆ ಪೊಲೀಸರು, ಜಿಲ್ಲಾಡಳಿತ ಬಹಳಷ್ಟು ಶ್ರಮಿಸಿದ್ದರು. ಸೋಮವಾರ ಬೆಳಿಗ್ಗೆ ಕಿರಿಮಂಜೇಶ್ವರ ಹೊಸಹಿತ್ಲು ಬಳಿ ಕಡಲಕಿನಾರೆಯಲ್ಲಿ ಮೀನುಗಾರ ನಾಗ ಎನ್ನುವರ ಮೃತದೇಹ ಪತ್ತೆಯಾಗಿತ್ತು. ಸೋಮವಾರ ಮಧ್ಯಾಹ್ನದ ಬಳಿಕ ಮಂಗಳೂರಿನಿಂದ ಕೋಸ್ಟ್ ಗಾರ್ಡ್ ಬೋಟ್ ಆಗಮಿಸಿ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ರಾತ್ರಿ ವೇಳೆ ಶೇಖರ್ ಖಾರ್ವಿ ಲಕ್ಷ್ಮಣ ಖಾರ್ವಿ ಮತ್ತು ಮಂಜುನಾಥ್ ಖಾರ್ವಿಯವರ ಮುರೂ ಮೃತ ದೇಹಗಳು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.