ಕೃಷ್ಣಮಠಕ್ಕೂ ತಟ್ಟಿತೇ ಕೊರೋನಾ “ಸಂ”ಕಷ್ಟ

ಉಡುಪಿ: ಕೊರೋನಾ ಸಂಕಷ್ಟದಿಂದಾಗಿ ಉದ್ಯಮಿಗಳು ವಿವಿಧ ವರ್ಗಗಳು ಸರಕಾರದ ಮುಂದೆ ಬೇಡಿದ್ದಾಯಿತು. ಈಗ ಮಠ- ಮಂದಿರಗಳು ಕೂಡ ಬ್ಯಾಂಕಿನ ಮುಂದೆ ಸಾಲಕ್ಕಾಗಿ ಅರ್ಜಿ ಹಾಕುವಂತಾಗಿದೆ.

ವಿಶ್ವಪ್ರಸಿದ್ದ ಕೃಷ್ಣ ಮಠ ಕೊರೊನಾ ಕಾರಣ ವೂ ಸೇರಿದಂತೆ ಆದಾಯ ರಹಿತದ ದಿನಗ ಳಲ್ಲಿ ಮಠದ ವ್ಯವಸ್ಥೆ ಮತ್ತು ಸಿಬಂದಿ ಗಳ  ಸಂಬಳ ಇತ್ಯಾದಿಗಳಿಗಾಗಿ ಪರ್ಯಾಯ ಅದಮಾರು ಮಠ,  ಶ್ರೀಕೃಷ್ಣಮಠ ಒಂದು ಕೋ. ರೂ. ಸಾಲ ಕೋರಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಸಾಲ ಮಂಜೂರಾ ಗಿದ್ದು, 15 ಲಕ್ಷ ರೂ.ನಷ್ಟು ಹಣ ಪಡೆಯ ಲಾಗಿದೆ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪ್ರತಿನಿತ್ಯ ಶ್ರೀಕೃಷ್ಣನ ನಿತ್ಯಪೂಜೆ, ಸುಮಾರು 300 ಮಂದಿಗಾಗುವಷ್ಟು ಅನ್ನ ನೈವೇದ್ಯ, 100 ತೆಂಗಿನಕಾಯಿ, 2 ಡಬ್ಬಿ ತುಪ್ಪ, 1 ಡಬ್ಬಿ ಎಳ್ಳೆಣ್ಣೆ ಬಳಕೆಯಾಗುತ್ತದೆ. ಕೃಷ್ಣಮಠದಲ್ಲಿನ 300 ಮಂದಿ ಸಿಬ್ಬಂದಿ ಪೈಕಿ ಅರ್ಧದಷ್ಟು ಮಂದಿಗೆ ರಜೆ ನೀಡಲಾಗಿದ್ದರೂ ಅವರಿಗೆ ಪೂರ್ಣ ವೇತನ ನೀಡಲಾಗುತ್ತಿದೆ.

ಮಠದಲ್ಲಿ ಕೆಲಸ ಮಾಡುವ 150 ಸಿಬ್ಬಂದಿ ಊಟ, ವಿದ್ಯುತ್ ಶುಲ್ಕ ಇತ್ಯಾದಿ ಸೇರಿ ದಿನಕ್ಕೆ ಸುಮಾರು 1.25 ಲಕ್ಷ ರೂ.ಗಳಿಗೂ ಅಧಿಕ ಖರ್ಚು ಬರುತ್ತಿದೆ.

ಮಠದ ನಿರ್ವಹಣೆ, ಅಗತ್ಯ ದುರಸ್ತಿ ಇತ್ಯಾದಿ ಕೈಗೊಳ್ಳಲಾಗಿದೆ. ದಾನಿಗಳು, ಭಕ್ತರು ಹಾಗೂ ಸರ್ಕಾರದಿಂದ ಹಣ ಕೇಳುವುದು ಈ ಪರಿಸ್ಥಿತಿಯಲ್ಲಿ ಸೂಕ್ತವಲ್ಲ ಎಂಬ ಕಾರಣ ಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ. ಮಠದ ಆಶ್ರಯದಲ್ಲಿ ಶೈಕ್ಷಣಿಕ ಸಂಸ್ಥೆಗಳಿ ದ್ದರೂ ಅದರಿಂದ ಮಠ ಹಣ ಅಪೇಕ್ಷಿಸು ವುದು ಸರಿಯಲ್ಲ. ಮಠದ ಆದಾಯದ ಪಾಲನ್ನು ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಪರಿಪಾಠವಿದೆ.

ಆದರೆ, ಶೈಕ್ಷಣಿಕ ಸಂಸ್ಥೆಗಳಿಂದ ಮಠ ಆದಾಯ ಪಡೆದಿಲ್ಲ ಎಂದ ಶ್ರೀಪಾದರು, ಈ ಹಿಂದೆ ತಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಪರ್ಯಾಯ (1988- 90) ಅವಧಿಯಲ್ಲಿ 25 ಲಕ್ಷ ಸಾಲ ಪಡೆಯ ಲಾಗಿತ್ತು ಎಂದು ಶ್ರೀಗಳು ಸ್ಮರಿಸಿದರು.

 
 
 
 
 
 
 
 
 
 
 

Leave a Reply