Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಉಡುಪಿ ಜಿಲ್ಲಾ ಬಿಜೆಪಿ ಸಂವಹನ ಪ್ರಕೋಷ್ಠ ಸಂಚಾಲಕರಾಗಿ ಚಿಟ್ಟೆ ರಾಜಗೋಪಾಲ ಹೆಗ್ಡೆ


ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರ – ಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಸೇವೆ ಸಲ್ಲಿಸಿದ ಚಿಟ್ಟೆ ರಾಜಗೋಪಾಲ ಹೆಗ್ಡೆ ಯವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿ ಲಾಡಿ ಸುರೇಶ್ ನಾಯಕ್ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಶಿಫಾರಸು ಮೇರೆಗೆ ಜಿಲ್ಲಾ ಸಂವಹನ ಪ್ರಕೋಷ್ಠ ಸಂಚಾಲಕರನ್ನಾಗಿ ನೆಮಿಸಿದ್ದಾರೆ.


ಚಿಟ್ಟೆ ರಾಜಗೋಪಾಲ ಹೆಗ್ಡೆ ಬೈಂದೂರು ಕ್ಷೇತ್ರದ ಜಿ.ಪ, ತಾ.ಪ,ಹಾಗೂ ಗ್ರಾ.ಪ ಚುನಾವಣೆಯಲ್ಲಿ ವೀಕ್ಷಕರಾಗಿ ಕೆಲಸ ಮಾಡಿದ್ದು ಬೈಂದೂರು ಮಂಡಲದ ಬಿ.ಎಲ್.ಎ – 1 ಆಗಿ ವಿಧಾನ ಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಕಳೆದ ಸಾಲಿನ ಲೋಕ ಸಭಾ ಚುನಾವಣೆಯಲ್ಲಿ ಉಡುಪಿ ವಿಧಾನ(ನಗರ ಹಾಗೂ ಗ್ರಾಮಾಂತರ) ಸಭಾ ಕ್ಷೇತ್ರದ ಪ್ರಭಾರಿಯಾಗಿ ಕೆಲಸ ಮಾಡಿರುತ್ತಾರೆ.


ಹೆಗ್ಡೆಯವರು ಉಳ್ಳೂರು – 74 ಗ್ರಾಮದ ನೂತನ ಗ್ರಾಮ ಪಂಚಾಯತಿ ಅಸ್ತಿತ್ವದ ರೂವಾರಿಯಾಗಿದ್ದರೆ. ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲ ಕರಾಗಿ , ಉಳ್ಳೂರು – 74 ಗ್ರಾಮದ ಗ್ರಾಮ ಅರಣ್ಯ ಸಮಿತಿ ಕಾರ್ಯ ನಿರ್ವಹಣಾ ಸದಸ್ಯರಾಗಿ, ಸಾಮಾಜಿಕ ಹೋರಾಟಗಾರರಾಗಿ ಈ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!