Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಅಗ್ನಿವೀರ ಸೈನಿಕನಾಗಿ ಆಯ್ಕೆಯಾದ ಅಲೆವೂರಿನ ಹೆಮ್ಮೆಯ ಚಿದಾನಂದರಿಗೆ ಗೌರವಾರ್ಪಣೆ

ಮೋದೀಜಿ ಸರಕಾರದ ನೂತನ ಯೋಜನೆಯಾದ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರ ಸೈನಿಕನಾಗಿ ಆಯ್ಕೆಯಾದ ನಮ್ಮ ಅಲೆವೂರಿನ ಹೆಮ್ಮೆಯ ಚಿದಾನಂದ ಇವರನ್ನು, ಕಾಪು ಕ್ಷೇತ್ರದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರೊಂದಿಗೆ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ಜಿಲ್ಲೆಯಲ್ಲಿ ಕೇವಲ 2 ಜನ ಅಗ್ನಿವೀರ ರಾಗಿ ಆಯ್ಕೆಯಾಗಿದ್ದು ಅದರಲ್ಲಿ ಒಬ್ಬರು ನಮ್ಮೂರಿನವರು ಎನ್ನುವುದು ನಮಗೆ ಹೆಮ್ಮೆ. ಮಾನ್ಯ ಶಾಸಕರು ಸೈನಿಕರ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊರಂಗ್ರಪಾಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಸೇರಿಗಾರ್, ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷರಾದ ಶಶಿಕಲಾ ಶೆಟ್ಟಿ, ಶಕ್ತಿಕೇಂದ್ರ ಪ್ರಮುಖರುಗಳಾದ ಆಶೀಶ್ ಶೆಟ್ಟಿ, ಶೇಖರ ಆಚಾರ್ಯ, ಕಾರ್ಯಕರ್ತರುಗಳಾದ ಸುರೇಶ್ ನಾಯಕ್, ಹನಮಪ್ಪ ಮಾದರ ಗುರುಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಅರುಣ್ ಆಚಾರ್ಯ ಇವರ ಮುತುವರ್ಜಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಚಿದಾನಂದ ರವರ ತಂದೆ ರಮೇಶ್ ತಾಯಿ ರಂಗವ್ವ ಮತ್ತು ಸಹೋದರ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!