ಸಿದ್ದಾಂತಕ್ಕಾಗಿ ವ್ಯವಸ್ಥೆಯೊಂದಿಗೆ ರಾಜಿಯಾಗದ ಚಂಪಾ~ ಎ ಎಸ್ ಎನ್ ಹೆಬ್ಬಾರ್

ವ್ಯವಸ್ತೆಯನ್ನು ವಿಮರ್ಶಿಸುತ್ತಲೇ ತಮ್ಮ ಸಿದ್ದಾಂತ ಮತ್ತು ಕನ್ನಡ ಅಸ್ಮಿತೆಯನ್ನು ಕಾಪಾಡಿಕೊಂಡು ಬದುಕಿದವರು ಚಂದ್ರಶೇಕರ ಪಾಟೀಲರು. ತಮ್ಮ ಹರಿತವಾದ ಶಬ್ದ ಪ್ರಯೋಗದಿಂದಲೇ ವ್ಯವಸ್ತೆಯನ್ನು ತಿವಿಯುತ್ತಾ ಕನ್ನಡ ದನಿಯನ್ನು ಗಟ್ಟಿಗೊಳಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾದವರು ಚಂಪಾ ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷ ಎ ಎಸ್ ಎನ್ ಹೆಬ್ಬಾರ್ ಹೇಳಿದರು.

ಅವರು ಕಸಾಪ ಉಡುಪಿ ಜಿಲ್ಲೆ ಕುಂದಾಪುರದ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಚಂಪಾ ನುಡಿ ನಮನ ಮತ್ತು ಕಸಾಪ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಪನ್ಯಾಸಕ ಮತ್ತು ಚಂಪಾ ಶಿಷ್ಯ ಕವಿ ಕೋನಳ್ಳಿ ರಾಜೀವ ನಾಯಕ್ ಚಂಪಾರನ್ನು ಸ್ಮರಿಸಿದರು.

ಪ್ರಾಂಶುಪಾಲ ರಾಮಕೃಷ್ಣ ನುಡಿ ನಮನ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿ ನಮನ ಸಲ್ಲಿಸಿ, ಕಸಾಪ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರ್ವಹಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply