ಉಚಿತ ಕ್ಯಾರಿಯರ್ ಗೈಡೆನ್ಸ್-ವಿದ್ಯಾರ್ಥಿವೇತನ ಜಾಗೃತಿ ಕಾರ್ಯಕ್ರಮ

ಉಡುಪಿ, ಜೂ.7: ನಮ್ಮ ನಾಡ ಒಕ್ಕೂಟದ ಆಶ್ರಯದಲ್ಲಿ ಭಟ್ಕಳ ಅಂಜು ಮಾನ್ ಹಮಿ ಇ ಮುಸ್ಲಿಮೀನ್ ಸಹಯೋಗದೊಂದಿಗೆ ಉಚಿತ ಕ್ಯಾರಿಯರ್ ಗೈಡೆನ್ಸ್ ಮತ್ತು ವಿದ್ಯಾರ್ಥಿ ವೇತನ ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಉಡುಪಿಯ ಮಣಿಪಾಲ ಇನ್ ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸ ಲಾಗಿತ್ತು.

ಮಣಿಪಾಲ ಇನ್ ಹೊಟೇಲಿನ ಆಡಳಿತ ನಿರ್ದೇಶಕ ವೌಲಾನ ಇಬ್ರಾಹಿಂ ಮಾತನಾಡಿ, ಶಿಕ್ಷಣ ಎಂಬುದು ಅತೀ ಅಗತ್ಯವಾಗಿದ್ದು, ಅದರ ಜೊತೆಗೆ ಸಂಸ್ಕಾರ ಕ್ಕೂ ಆದ್ಯತೆ ನೀಡಬೇಕು. ಪ್ರಾಮಾಣಿಕತೆ, ನಿಷ್ಠೆ, ತಂದೆತಾಯಿಗಳಿಗೆ ಗೌರವ ಕೊಡುವುದು ಕೂಡ ಮುಖ್ಯ. ಹಿರಿಯ ಆಶೀರ್ವಾದ ಇದ್ದರೆ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ. ಇಂದು ಎಲ್ಲರಿಗೂ ಉದ್ಯೋಗ ಸಿಗು ವುದು ಕಷ್ಟ. ಆದುದರಿಂದ ಉದ್ಯಮದ ಕಡೆಗೂ ವಿದ್ಯಾರ್ಥಿಗಳು ಹೆಜ್ಜೆ ಇಡ ಬೇಕು ಎಂದು ತಿಳಿಸಿದರು.

ಅಂಜುಮಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮೆನೇಜ್ ಮೆಂಟ್ನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನಾದ್ದೀನ್, ಮಣಿಪಾಲ ಮಾಹೆಯ ಪ್ರೊಫೆಸರ್ ಡಾ.ಅಬ್ದುಲ್ ಅಝೀಝ್, ಅನ್ಸಾರ್ ತೋನ್ಸೆ ಮುಖ್ಯ ಅತಿಥಿ ಗಳಾಗಿದ್ದರು. ಅಧ್ಯಕ್ಷತೆಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ಮುಶ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು.ಸಿಐಜಿಎಂಎ ಸ್ಥಾಪಕ ಹಾಗೂ ಸಿಇಓ ಅಮೀನ್ ಇ ಮುದಸ್ಸಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. 

ಈ ಸಂದರ್ಭದಲ್ಲಿ ಈ ಬಾರಿಯ ಎಸೆಸೆಲ್ಸಿಯ ಅತ್ಯಧಿಕ ಅಂಕ ಗಳಿಸಿದ ಕುಮುಟಾದ ಅಂಧ ವಿದ್ಯಾರ್ಥಿ ಮುಹಮ್ಮದ್ ಕೈಫ್ ಸಹಿತ 34 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಒಕ್ಕೂಟದ ಕೇಂದ್ರ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್, ಕೋಶಾಧಿಕಾರಿ ಅಬ್ದುಲ್ ಹಮೀದ್, ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್, ಸಾಕಿರ್ ಎಂ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಉಸ್ತಾದ್, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಕಾದಿರ್, ಸಗೀರ್, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ಅಹ್ಮದ್, ಕಾರ್ಯದರ್ಶಿ ಸಮೀರ್, ಕಾರ್ಕಳ ಅಧ್ಯಕ್ಷ ಶಾಕಿರ್ ಹುಸೈನ್ ಶಿಷಾ, ಬ್ರಹ್ಮಾವರ ಅಧ್ಯಕ್ಷ ಶೌಕತ್ ಅಲಿ, ಕಾಪು ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಯುಸೂಫ್, ಮುಸ್ತಫಾ, ಇಮ್ತಿಯಾಝ್ ಉಪಸ್ಥಿತರಿದ್ದರು. 

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ಫಾಝೀಲ್ ಅಹ್ಮದ್ ವಂದಿಸಿದರು. ಬೈಂದೂರು ತಾಲೂಕು ಅಧ್ಯಕ್ಷ ಅಬ್ದುಲ್ ಸಮಿ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply