ತೂಗು ಸೇತುವೆ ಮುರಿದು ಬಿದ್ದು 60 ಕ್ಕೂ ಅಧಿಕ ಜನರ ಸಾವು!

ಗುಜರಾತ್: ಇಲ್ಲಿನ ಮಾರ್ಬಿ ಪ್ರದೇಶದಲ್ಲಿ ಮಚ್ಚ ನದಿಗೆ ಅಡ್ಡಲಾಗಿ ,ಹಾಕಿರುವ ತೂಗು ಸೇತುವೆ ಮುರಿದು ಬಿದ್ದ ಪರಿಣಾಮವಾಗಿ 35ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು ಎಂದು ಈ ಹಿಂದೆ ಅಂದಾಜಿಲಾಗಿತ್ತು. ಆದರೆ ಈ ಸಂಖ್ಯೆ ಇನ್ನೂ
ಹೆಚ್ಚಾಗಿದ್ದು, ಸತ್ತವರ ಸಂಖ್ಯೆ 60ಕ್ಕೂ ಅಧಿಕ ಎಂಬುದು ತಿಳಿದುಬಂದಿದೆ.

ಈ ಅವಘಡಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬ್ರಿಜೇಶ್ ಮೇರ್ಜಾ ಪ್ರತಿಕ್ರಿಯಿಸಿದ್ದು,
ಸಾವಿಗೀಡಾದವರ ಸಂಖ್ಯೆ 60ಕ್ಕೂ ಅಧಿಕ ಎಂಬುದಾಗಿ ಹೇಳಿದ್ದಾರೆ.
ವರೆಗೆ ಕಡಿತ ಇನ್ನು ಸೇತುವೆ ಕೆಳಗೆ ಬಹಳಷ್ಟು ಹೂಳು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುವ
ನಿಟ್ಟಿನಲ್ಲಿ ಅಲ್ಲಿಂದ ನೀರನ್ನು ಪಂಪ್ ಮಾಡಿ ಹೊರಗೆ ಹಾಕುವ ಪ್ರಯತ್ನಕ್ಕೂ ಮುಂದಾಗಲಾಗಿದೆ ಎಂದು ಬಿಜೆಪಿ ಸಂಸದ
ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂಡರಿಯಾ ತಿಳಿಸಿದ್ದಾರೆ.

ತೂಗು ಸೇತುವೆ ಮಿತಿಮೀರಿದ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೆ ತೂಗು ಸೇತುವೆ ಮೇಲಿದ್ದವರು ಸಂಭ್ರಮಿಸುವ ಭರದಲ್ಲಿ ಅತಿಯಾಗಿ ತೂಗುವಂತೆ ಕುಣಿದಾಡಿದ್ದೂ ಕಾರಣ ಎನ್ನಲಾಗುತ್ತಿದ್ದು, ಹಾಗೆ
ಓಲಾಡುತ್ತಿರುವ ದೃಶ್ಯಾವಳಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Leave a Reply