‘ಜೀವನ-ಪಾವನ’ ಪ್ರದರ್ಶನ ಪೂರ್ವ ಅವಲೋಕನ

ದಿನಾಂಕ 06.08.2022 ರಂದು ಶನಿವಾರ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಸದಸ್ಯರಿಂದ ಕುಮಟಾ ಶ್ರೀ ಶಾಂತೇರಿ ಕಾಮಾಕ್ಷಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಗಳ ಚಾತುರ್ಮಾಸ ವೃತದ ಪ್ರಯುಕ್ತ ‘ಜೀವನ ಪಾವನ’ ಎಂಬ ಕೊಂಕಣಿ ನಾಟಕ ಪ್ರದರ್ಶನ ಗೊಳ್ಳಲಿದೆ.
ಈ ನಾಟಕದ ಸನ್ನಿವೇಶಗಳು ಕಲಿಯುಗದ ಈ ಕಾಲಘಟ್ಟದಲ್ಲಿ, ಆಕಸ್ಮಿಕವಾಗಿ ದೇವರೇ ಭೂಲೋಕಕ್ಕೆ ಆಗಮಿಸಿ, ಜನರ ಬವಣೆಗಳನ್ನು ಪರಿಹರಿಸಲು ಪ್ರಯತ್ನಿಸಿದಾಗ ಆಗಬಹುದಾದ ವಿಪರ್ಯಾಸಗಳನ್ನು ಕಲ್ಪನೆ ಮಾಡ ಕಲಾಭಿಮಾನಿಗಳಿಗೆ ಸಾದರ ಪಡಿಸುವತ್ತ ಒಂದು ಪ್ರಯತ್ನ ಎಂದು ಹೇಳಬಹುದು.
      ಈಗಿನ ಆಧುನಿಕ ಯುಗದಲ್ಲಿ ವಿದೇಶಿ ಸಂಸ್ಕೃತಿಯ ಅನುಕರಣೆಯ ಫಲವೂ ಅಥವಾ ಮಾರ್ಗದರ್ಶನದ ಕೊರತೆಯ ಕಾರಣದಿಂದಲೋ ಜನರ ಆಲೋಚನೆಗಳು ಹೇಗಿರುತ್ತದೆ ಎಂದು ತೋರಿಸುವ ಸಲುವಾಗಿ ಪತ್ರಿಕೆಯಲ್ಲಿ ಬಂದ ಪುಟ್ಟ ಪ್ರಸಂಗ ಹಾಗೂ ಶ್ರೀಗುರುವರ್ಯರು ಆಶೀರ್ವಚನ ಸಂದರ್ಭದಲ್ಲಿ ಹೇಳಿದ ಕಥೆಗಳಿಗೆ ಸುಂದರವಾಗಿ ನಾಟಕ ರೂಪ ಕೊಟ್ಟು, ಸುಶ್ರಾವ್ಯ ಸಂಗೀತ , ಮನಮುಟ್ಟುವ ಹಾಸ್ಯ ಲೇಪನದಿಂದ ಒಳಗೊಂಡು ,ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರೂಪುಗೊಂಡ ಕಿರುನಾಟಕ ಪ್ರದರ್ಶನ ಗೊಳ್ಳಲಿದೆ. ನಾಟಕಾಸಕ್ತರ ಉಪಸ್ಥಿತಿ ಮತ್ತು ಪ್ರೋತ್ಸಾಹವನ್ನು ತಂಡದ ಸರ್ವ ಸದಸ್ಯರು ನಿರೀಕ್ಷಿಸುತ್ತಾರೆ.
~ ಕೆ.ಪುಂಡಲೀಕ ನಾಯಕ್, ನಾಯ್ಕನಕಟ್ಟೆ ಬೈಂದೂರು
 
 
 
 
 
 
 
 
 
 
 

Leave a Reply