ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಾರ್ವಜನಿಕ ಹಿತಾಸಕ್ತಿಯಲ್ಲಿ ಪ್ರಕಟಿಸಿದ ಕೋವಿಡ್ -19 ಜನಜಾಗ್ರತಿ ವಾಲಪೋಸ್ಟರ್ಸ್ ಮತ್ತು ಸ್ಟಿಕರ್ಸ್.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರು ಈ ಲಾಕ್ ಡೌನ್ ಕ್ಲಿಷ್ಟಕರ ಸಮಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೋವಿಡ್ ಮಹಾಮಾರಿಯಿಂದ ಅಮೂಲ್ಯ ಜೀವಗಳ ರಕ್ಷಣೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ನೀಡುತ್ತಿರುವ ವೈದ್ಯರು, ನರ್ಸಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಸೈನಿಕರು,ಗ್ರಾಮ ಪಂಚಾಯತ್, ನಗರಸಭಾ, ಪುರಸಭಾ ನೌಕರರು ಮತ್ತು ಸ್ವಚ್ಛತಾ ಸಿಬ್ಬಂದಿಗಳ ಸೇವೆ ಅಮೂಲ್ಯ ಎಂದು ಪರಿಗಣಿಸಿ,
ಅವರ ಸೇವೆಯನ್ನು ಗುರುತಿಸಿ ಗೌರ​ವಿ​ಸುವ ಉದ್ದೇಶದಿಂದ ಕೋವಿಡ್ ಜನಜಾಗ್ರತಿ ಪೋಸ್ಟರ್ಸ್ ಗಳನ್ನು ಮಾಡಿ ಉಡುಪಿ ಮತ್ತು ದಕ್ಷಿಣ ಕನ್ನಡದ ಗ್ರಾಮ ಪಂಚಾಯತ್, ಪುರಸಭೆ ಮತ್ತು ನಗರಸಭೆ ಗಳಲ್ಲಿ ಪ್ರಸಾರ ಮಾಡುವ ಕೆಲಸ ಮಾಡುತ್ತಿದೆ. 
ಈ ವಿಭಿನ್ನ ಪೋಸ್ಟರ್ ಡಿಸೈನ್ ನ್ನು ಬಿಡಿಸಿಕೊಟ್ಟವರು ಕೂಡ ಒಬ್ಬ ಕೋವಿಡ್ ವಾರಿಯರ್ ಡಾ. ಸ್ಫೂರ್ತಿ.  (ಪ್ರಸ್ತುತ ಇವರು ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರಿನಲ್ಲಿ ಕೋವಿಡ್ ಡ್ಯೂಟಿ ಮಾಡುತಿದ್ದರೆ ).
ಇದರೊಂದಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಉತ್ತೇಜನ ನೀಡುವ ಸ್ಟಿಕರ್ ಗಳನ್ನು ಕೂಡ ಹಂಚಲಾಯಿತು. ಈ ಕಾರ್ಯದಲ್ಲಿ ಭಾರತೀಯ ವಿಕಾಸ ಟ್ರಸ್ಟಿನ ಸುಧೀರ್ ಕುಲಕರ್ಣಿ,​ ​ಶ್ರೀಕಾಂತ್ ಹೊಳ್ಳ, ಮನೋಹರ್ ಕಟ್ಗೆರಿ , ಅರುಣ್ ಪಠವರ್ಧನ್, ರಾಘವೇಂದ್ರ ಆಚಾರ್ ಮತ್ತು ಸುರೇಶ ಕುಲಾಲ್ ಭಾಗವಹಿಸಿದ್ದರು.
 
 
 
 
 
 
 
 
 
 
 

Leave a Reply