ವಸ್ರ ವಿನ್ಯಾಸ ತರಬೇತಿ ಕಾರ‍್ಯಕ್ರಮ ಉದ್ಘಾಟನೆ

ಉಡುಪಿ:  4 ವಾರಗಳ ವಸ್ರ ವಿನ್ಯಾಸ ತರಬೇತಿಯು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ರೋಟರಿ ಕ್ಲಬ್ ಝೋನ್-4, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ

​ಟ್ರಸ್ಟ್ ನಲ್ಲಿ ​ಆರಂಭಗೊಂಡಿದೆ 
ತರಬೇತಿ ಕಾರ‍್ಯಕ್ರಮವನ್ನು ಮಣಿಪಾಲದ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಹಿರಿಯ ವ್ಯವಸ್ಥಾಪಕ ಪ್ರಭಾ ಹೆಚ್.ಎಸ್ ಉದ್ಘಾಟಿಸಿ ಪ್ರತಿಯೊಬ್ಬ ಮಹಿಳೆಯು ಸ್ವಾವಲಂಬಿಯಾಗಲು ಈ ರೀತಿಯ ತರಬೇತಿಗಳು ಬಹಳ ಸಹಕಾರಿ ಹಾಗು ಮಹಿಳೆಯರಿಗೆ ಸ್ವಂತ ಉದ್ಯೋಗ ನಡೆಸಲು ಬ್ಯಾಂಕ್‌ಗಳು ಅನೇಕ ಸೌಲಭ್ಯಗಳನ್ನು ನೀಡುತ್ತಿವೆ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ರೋಟರಿ ಕ್ಲಬ್‌ನ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಇವರು ಶಿಬಿರಾರ್ಥಿಗಳಿಗೆ ಕೌಶಲ್ಯಭಿವೃದ್ಧಿಯ ಮಹತ್ವದ ಬಗ್ಗೆ ತಿಳಿಸಿದರು. ಹಾಗೆಯೇ ಉಡುಪಿ ರೋಟರಿ ಕ್ಲಬ್‌ನ ಕರ‍್ಯದರ್ಶಿ ದೀಪಾ ಭಂಡಾರಿ ಇವರು ಪ್ರತಿಯೊಬ್ಬ
ಮಹಿಳೆಯು ಸ್ವಾವಲಂಬಿಯಾಗಿ ಜೀವನ ನಡಿಸಬೇಕೆಂದು ಹೇಳಿದರು.
ಭಾರತೀಯ ವಿಕಾಸ ಟ್ರಸ್ಟ್ನ ಮುಖ್ಯ ಕಾರ‍್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ, ಸಂಪನ್ಮೂಲ ವ್ಯಕ್ತಿ ರಮ್ಯ ಎ ಸಿ ಇವರು ಉಪಸ್ಥಿತರಿದ್ದರು. ಮೊದಲಿಗೆ ಭಾರತೀಯ ವಿಕಾಸ ಟ್ರಸ್ಟಿನ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಅತಿಥಿಗಳನ್ನು ಸ್ವಾಗತಿಸಿದರು. ಬಿವಿಟಿಯ ಮಾನವ ಸಂಪನ್ನೂಲ ಅಧಿಕಾರಿ ಗೀತಾ ಆರ್ ರಾವ್ ವಂದಿಸಿದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply