Janardhan Kodavoor/ Team KaravaliXpress
26 C
Udupi
Sunday, March 7, 2021

​ಬ್ರಹ್ಮಾವರ ತಾಲೂಕು ಕಂದಾಯ ಇಲಾಖೆ ಪೌತಿ ಖಾತೆ ಆಂದೋಲನ

ಬ್ರಹ್ಮಾವರ ತಾಲ್ಲೂಕಿನಲ್ಲಿ ಸರ್ಕಾರದ ಕಂದಾಯ ಇಲಾಖೆಯ ಪೌತಿ ಖಾತೆ ಬದಲಾವಣೆ ಆಂದೋಲನ ಕಾರ್ಯಕ್ರಮಕ್ಕೆ ಶುಕ್ರವಾರ ಬ್ರಹ್ಮಾವರ ಹೋಬಳಿಯ ಕಂದಾಯ ನಿರೀಕ್ಷಕ ​ಲಕ್ಶ್ಮೀನಾರಾಯಣ ಭಟ್ ತಾಲೂಕಿನ ಆರೂರಿನಲ್ಲಿ ಫಲಾನುಭವಿಗಳ ಮನೆಗೆ ಭೇಟಿ ಆಂದೋಲನದ ಬಗ್ಗೆ ಮಾಹಿತಿ ನೀಡಿದರು.  

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿಯಂತೆ ಜಮೀನಿನ ಮಾಲಕತ್ವವು ಮೃತರ ಉತ್ತರಾಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ​ಸ್ಥಾನವನ್ನು ಹೊಂದಿದ್ದರೂ, ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿ ಪಡಿಸಲು ಬ್ಯಾಂಕ್‌ಗ​ಳಿಂದ ಸಾಲ ಸೌಲಭ್ಯ ದೊರಕಿಸಲು, ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸಿದಾಗ ಸರ್ಕಾರದ ಪರಿಹಾರ ಪಡೆಯಲು ಆಗುತ್ತಿರುವ ಸಮಸ್ಯೆ ನಿವಾರಿಸಿ ಪರಿಹಾರದ ಹಣವನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರದ ಆದೇಶದಂತೆ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನಲ್ಲಿ  ಶುಕ್ರವಾರ ಈ ಆಂದೋಲನ ನಡೆಸಲಾಯಿತು. 

ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರ ಮಾರ್ಗದರ್ಶನದಂತೆ ಬ್ರಹ್ಮಾವರ ಹೋಬಳಿಯ ಕಂದಾಯ ನಿರೀಕ್ಷಕ ​ ಲಕ್ಶ್ಮೀನಾರಾಯಣ ಭಟ್ ಮತ್ತು ಆರೂರು ಗ್ರಾಮದ ಗ್ರಾಮಲೆಕ್ಕಿಗ ರಾಜಾಸಾಬ್ ಮತ್ತು ಗ್ರಾಮಕರಣಿಕ ಜಯಕರ ನಾಯ್ಕ ಅವರ ತಂಡ ಆರೂರು ಗ್ರಾಮದ ಮೋನಪ್ಪ ನಾಯ್ಕ  ಅವರ ಮನೆಗೆ ತೆರಳಿ ನಮೂನೆ​ 1ರಲ್ಲಿ ಅರ್ಜಿ ಹಾಗೂ ಸಂ​ಬಂದ ​ಪಟ್ಟ ದಾಖಲೆಗಳಾದ ಮೃತ ಸಮರ್ಥನಾ ಪತ್ರ, ಮೃತ ಖಾತೆದಾರರ ವಾರೀಸುದಾರರ ವಿವರ, ಜಮೀನಿನ ವಿವರಗಳನ್ನು ಪಡೆದು ಕುಟುಂಬದ ಸದಸ್ಯರಿಗೆ ಆಂದೋಲನದ ಬಗ್ಗೆ ಮಾಹಿತಿ ನೀಡಿದರು.  

ಈ ಸಂದರ್ಭ ಮಾತನಾಡಿದ ಕಂದಾಯ ನಿರೀಕ್ಷಕ ​ಲಕ್ಶ್ಮೀ ನಾರಾಯಣ ಭಟ್ ಕಂದಾಯ ಇಲಾಖಾ ವ್ಯಾಪ್ತಿಯ ಬ್ರಹ್ಮಾವರ ಹೋಬಳಿಯ ​13 ಗ್ರಾಮ ಪಂಚಾಯಿತಿಯ ​21 ಗ್ರಾಮದಲ್ಲಿ ಈ ಆಂದೋಲನ ನಡೆಯುತ್ತಿದ್ದು, ಸುಮಾರು ​19ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಅರ್ಜಿ ಸ್ವೀಕರಿಸಿದ ಒಂದು ತಿಂಗಳೊಳಗೆ ಖಾತೆ ಬದಲಾವಣೆ ಕಾರ್ಯ ಉಚಿತವಾಗಿ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.


- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕೊಡವೂರು ಗರಡಿಮಜಲಿ ನಲ್ಲಿ ಐಸಿರಿ ಸೂಪರ್ ಸ್ಟೋರ್ ಶುಭಾರಂಭ

ಕೊಡವೂರು ಗರಡಿ ಮಜಲಿನ ಆಸುಪಾಸಿನ ಜನತೆಗೆ ಶುಭ ಸುದ್ಧಿ. ದಿನ ಬಳಕೆಯ ಗ್ರಹೋಪಯೋಗಿ  ವಸ್ತುಗಳ ಪರಿಶುದ್ಧ ಹಾಗು ಪರಿಪೂರ್ಣ ಭಂಡಾರ " ಐ ಸಿರಿ ಸೂಪರ್ ಸ್ಟೋರ್" ಇದೀಗ ನಿಮ್ಮೂರಿನಲ್ಲಿ.. ಸ್ನೇಹಮಯಿ ಸೇವೆಯೊಂದಿಗೆ, ಆಕರ್ಷಕ ದರದೊಂದಿಗೆ,...

ಡಾ| ಮೋಹನ್ ಆಳ್ವ ಮಡಿಲಿಗೆ  ‘ವಿಶ್ವ ಪ್ರಭಾ’ ಪುರಸ್ಕಾರ

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಂದ ಉದ್ಘಾಟನೆಗೊಂಡ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಾಕ್ಷಾಚಿತ್ರ , ನಾಟಕ, ನೃತ್ಯ, ಲಲಿತ ಕಲೆಗಳು ಹೀಗೆ ಯುವಪೀಳಿಗೆಯ ಹೃದಯದಲ್ಲಿ ಸೌಂದರ್ಯ ಪ್ರಜ್ಞೆ...

ಬನ್ನಂಜೆ ಶ್ರೀ ಶನಿಕ್ಷೇತ್ರದಲ್ಲಿ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ ​: ​ ಬನ್ನಂಜೆ ಗರಡಿ ರಸ್ತೆ  ಶ್ರೀ ಶನಿಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ  ವಾರ್ಷಿಕ ಶನೈಶ್ವರ ಉತ್ಸವವು...

  ನವೀನ್ ಕೆ.ಶೆಟ್ಟಿಬೆಟ್ಟು​ರವರ “ಅನಾವರಣ​”​ ​ಕೃತಿ ಲೋಕಾರ್ಪಣೆ 

ಉಡುಪಿ :- ಇತ್ತೀಚೆಗಿನ ದಿನಗಳಲ್ಲಿ ಬರೆಯುವ ಮನೋಭಾವನೆ ಕಡಿಮೆಯಾಗುತ್ತಿದೆ ಇದು ಸರಿಯಲ್ಲ ಬರೆಯುವಿಕೆ ಮತ್ತು ಓದುವಿಕೆಯು ಮನುಷ್ಯನನ್ನು ಒತ್ತಡಗಳಿಂದ ದೂರ ಮಾಡಬಲ್ಲದು ಎಂದು ಬಡಗಬೆಟ್ಟು ಕ್ರೆ.ಕೋ. ಸೋಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ...

ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನದ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ಧ ಸಂಭ್ರಮದ ಆಚರಣೆ

ಉಡುಪಿ: ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಮ್, ಶ್ರೀಗಳ ಷಷ್ಟ್ಯಬ್ಧ ಸಂಭ್ರಮದ ಆಚರಣೆಯ ಪ್ರಯುಕ್ತ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉಡುಪಿಯಲ್ಲಿ ಕೂಡಾ ಷಷ್ಟ್ಯಬ್ಧ ಸಮಿತಿ ರಚಿಸಲಾಗಿದೆ.  ಉಡುಪಿ...
error: Content is protected !!