ಬ್ರಹ್ಮಾವರ: ಜನಪರ ರೈತ ಹೋರಾಟ ಸಮಿತಿಯಿಂದ ರೈತರ ಬೇಡಿಕೆ ಈಡೇರಿಕೆ ಒತ್ತಾಯಿಸಿ ಹೋರಾಟ

ರಸ್ತೆ ತಡೆದು ಪ್ರತಿಭಟನೆ: ಭತ್ತಕ್ಕೆ 2500ರೂ ಬೆಂಬಲ ಬೆಲೆ ನಿಗದಿಗೆ ಒತ್ತಾಯ

ಕೋಟ, ಬ್ರಹ್ಮಾವರ, ನ.೬: ಜನಪರ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರ ವಿವಿಧ ಸಂಘಟನೆಗಳ ಆಶ್ರಯದಲ್ಲಿ, ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ನ.೬ರಂದು ಬ್ರಹ್ಮಾವರ ಬಂಟರ ಭವನದ ಸಮೀಪ ಪಕ್ಷಾತೀತವಾಗಿ ಸಾಮೂಹಿಕ ನಾಯಕತ್ವದಡಿ ಪ್ರತಿಭಟನಾ ಸಭೆ ಜರಗಿತು.

ಬಾಳ್ಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮಿ ಮಾತನಾಡಿ, ಕರಾವಳಿಯ ರೈತರು ಕಷ್ಟದಲ್ಲಿದ್ದಾರೆ. ಜನಪ್ರತಿನಿಽಗಳು ಈ ಬಗ್ಗೆ ಗಮನಹರಿಸಬೇಕು. ಭತ್ತಕ್ಕೆ ಉತ್ತಮ ಬೆಂಬಲ ಬೆಲೆ ನೀಡಬೇಕು ಎಂದರು. ಕರಾವಳಿ ರೈತ ಚಳುವಳಿಯಲ್ಲಿ ಪ್ರಮುಖರಾಗಿರುವ ವಿಕಾಸ್ ಹೆಗ್ಡೆ ಮಾತನಾಡಿ, ಸರಕಾರ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಮರೆತಿದೆ. ಕರಾವಳಿ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ.

ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿ ಕೃಷಿ ನಾಶವಾಗಲಿದೆ ಎಂದರು. ಇದು ಕೇವಲ ಸಾಂಕೇತಿಕ ಹೋರಾಟವಾಗಿದ್ದು ಮುಂದೆ ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾಽಕಾರಿಗಳ ಕಚೇರಿ ಎದುರು ಹೋರಾಟ ಸಂಘಟಿಸುವುದಾಗಿ ಕಿಸಾನ್ ಸಂಘದ ಸತ್ಯನಾರಾಯಣ ಉಡುಪ ತಿಳಿಸಿದರು. ಜಿಲ್ಲೆಯ ಜನಪ್ರತಿನಿಽಗಳು ರೈತರ ಸಮಸ್ಯೆ ಕುರಿತು ಮೌನವಾಗಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ತಡೆದು ಪ್ರತಿಭಟನೆ :- ಸುಮಾರು 400ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕರಾವಳಿ ರೈತರ ಪ್ರಮುಖ ಬೇಡಿಕೆಗಳಾದ, ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ 2500ರೂ ಬೆಂಬಲ ಬೆಲೆ ನಿಗದಿಗೊಳಿಸಬೇಕು,ಗ್ರಾಮ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು.

ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕೃಷಿ ನೀತಿ ಜಾರಿಗೊಳಿಸಬೇಕು, ಕೃಷಿ ಇಲಾಖೆ, ಎ.ಪಿ.ಎಂ.ಸಿ.ಗಳನ್ನು ರೈತಸ್ನೇಹಿಯಾಗಿರುವಂತೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರಬೇಕು, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಶೀಘ್ರ ಬಿಡುಗಡೆಗೊಳಿಸಬೇಕು, ಕಟಾವು ಯಂತ್ರಗಳ ಬಾಡಿಗೆ ನಿಯಂತ್ರಿಸಬೇಕು, ಜಿಲ್ಲೆಯಲ್ಲಿ ವಾಣಿಜ್ಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು, ವ್ಯವಸಾಯಿಕ, ಸಹಕಾರಿ ಬ್ಯಾಂಕ್‌ಗಳು ಲೇವಾದಾವಿ ಹೊರತಾದ ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸರಕಾರ ಸಮನ್ವಯ ನಡೆಸಬೇಕು ಎಂದು ಆಗ್ರಹಿಸಿದ ಮನವಿಯನ್ನು ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.


ಅನಂತರ ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯನ್ನು 10 ನಿಮಿಷಗಳ ಕಾಲ ತಡೆದ ಪ್ರತಿಭಟನಾಕಾರರು ಹೆದ್ದಾರಿಯಲ್ಲೇ ಹಡಿಮಂಚವನ್ನಿಟ್ಟು ಭತ್ತದ ತೆನೆಯನ್ನು ಬೇರ್ಪಡಿಸುವ ಮೂಲಕ ಶಕ್ತಿ ಪ್ರದರ್ಶಿಸಿದರು.
ಸಾಮಾಜಿಕ ಮುಖಂಡರಾದ ಜ್ಞಾನ ವಸಂತ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸತ್ಯನಾರಾಯಣ ಉಡುಪ , ಶಾಂತಾರಾಮ ಶೆಟ್ಟಿ ಬಾರ್ಕೂರು, ಭೋಜ ಪೂಜಾರಿ ಗಿಳಿಯಾರು, ಕೋಟ ರೈತಧ್ವನಿ ಸಂಘಟನೆ ಅಧ್ಯಕ್ಷ ಮಣೂರು ಜಯರಾಮ್ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ, ಡಾ| ಸುನಿತಾ ಶೆಟ್ಟಿ, ರೈತ ಸಂಘದ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ, ಶಿವಮೂರ್ತಿ ಉಪಾಧ್ಯಾಯ ಪಾರಂಪಳ್ಳಿ, ಶಾನ್ಕಟ್ಟು ಉಮೇಶ್ ಶೆಟ್ಟಿ, ಉಮಾನಾಥ ಶೆಟ್ಟಿ, ಮನು ಹಂದಾಡಿ, ಮಂಜಯ್ಯ ಶೆಟ್ಟಿ, ರಘು ಮಧ್ಯಸ್ಥ ಪಾರಂಪಳ್ಳಿ.

ಶೇಡಿಕೋಡ್ಲು ವಿಠಲ ಶೆಟ್ಟಿ, ರವೀಂದ್ರ ಐತಾಳ ಪಡುಕರೆ, ಶಿವಾನಂದ ಅಡಿಗ ಮಣೂರು, ಭಾಸ್ಕರ ಶೆಟ್ಟಿ ಮಣೂರು, ರಮೇಶ್ ಪೂಜಾರಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಭರತ್ ಶೆಟ್ಟಿ ಗಿಳಿಯಾರು, ಜಯಕರ್ನಾಟಕ ಸತೀಶ್ ಪೂಜಾರಿ, ಜನನಿ ದಿವಾಕರ ಶೆಟ್ಟಿ, ಪ್ರವೀಣ್ ಯಕ್ಷಿಮಠ, ವಿನಯ ಕುಮಾರ್ ಕಬ್ಯಾಡಿ, ಉಮೇಶ್ ಶೆಟ್ಟಿ ಶಂಕರಣರಾಯಣ, ರವಿ ಕುಲಾಲ್, ಗೌತಮ್ ಹೆಗ್ಡೆ, ಪ್ರಕಾಶ್ ಶೆಟ್ಟಿ ಹೇರಾಡಿ, ದಿನೇಶ್ ಗಾಣಿಗ ಕೋಟ, ಕುಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಉದಯ್ ಶೆಟ್ಟಿ ಪಡುಕರೆ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಜನಪರ ಹೋರಾಟ ಸಮಿತಿಯ ಸಂಚಾಲಕರಾದ ವಸಂತ್ ಗಿಳಿಯಾರ್ ಸರಕಾರಕ್ಕೆ ಸಲ್ಲಿಸುವ ಮನವಿಯ ಬಗ್ಗೆ ಮಾಹಿತಿ ನೀಡಿದರು. ಅನುಷಾ ನಾಯಕ್ ವಂದಿಸಿದರು.

 
 
 
 
 
 
 
 
 
 
 

Leave a Reply