ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ- ಪ್ರವಾಸಿಗರಿಗೆ ನೀರಿನ ಸ್ವಚ್ಛತೆಯ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

ದಿನಾಂಕ 05/06/2022 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಲಿಗ್ರಾಮ ಪಾರಂಪಳ್ಳಿ ಯಲ್ಲಿ ಕಯಾಕಿಂಗ್ ಮಾಡುವುದರ ಜೊತೆಗೆ ಪ್ರವಾಸಿಗರಿಗೆ ನೀರಿನ ಸ್ವಚ್ಛತೆಯ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸುವ ಒಂದು ಅತ್ಯದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ಸ್ಕೌಟ್ ಆಯುಕ್ತರಾದ ಡಾಕ್ಟರ್ ವಿಜಯೇಂದ್ರ ವಸಂತರಾವ್ ಇವರ ಮಾರ್ಗದರ್ಶನ ಹಾಗೂ ಲೋಕೇಶ್ ಮೆಂಡನ್ ಹಾಗೂ ಮಿಥುನ್ ಕುಮಾರ್ ಮೆಂಡನ್ ಇವರ ಬಳಗ ದವರ ನೇತೃತ್ವದಲ್ಲಿ ಬಹಳ ಅರ್ಥಪೂರ್ಣವಾದ ಕಾರ್ಯಕ್ರಮ ಇಂದು ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮೂಡಿ ಬಂತು.

ಈ ಕಾರ್ಯಕ್ರಮದಲ್ಲಿ ಪಿ.ಪಿ.ಸಿ ಕಾಲೇಜಿನ ಸ್ಕೌಟ್ ರೋವರ್ ಲೀಡರ್ ಆಗಿರುವ ಸಂತೋಷ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಸುಮನ್ ಶೇಖರ್ ಸಂಘಟಿಸಿದರು.

 ಕಾರ್ಯಕ್ರಮದಲ್ಲಿ ರೋವರ್ಸ್ ರೇಂಜರ್ಸ್ ಗಳು ತಂಬಾಕು ರಹಿತ ಭಾರತ ವನ್ನಾಗಿಸಲು ನಮ್ಮ ಪಾತ್ರವೇನು ಎಂಬುದರ ಬಗ್ಗೆ ಸುದೀರ್ಘವಾಗಿ ಡಾಕ್ಟರ್ ರಾಮಚಂದ್ರ ಕಾಮತ್ ಇವರ ಮಾಹಿತಿಯನ್ನು ಕೊಟ್ಟರು.

 
 
 
 
 
 
 
 
 
 
 

Leave a Reply