Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಬ್ರಹ್ಮಾವರ ತಾಲೂಕು ಸ್ವಾತಂತ್ರ್ಯ ಹೋರಾಟಗಾರ ಹಂದಾಡಿ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ

ಸಪ್ಟೆಂಬರ್ 25 ರಂದು ಬ್ರಹ್ಮಾವರ ತಾಲೂಕು ಹಂದಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಇವರ ಮನೆಗೆ ನಾಮ ಫಲಕ ಅಳವಡಿಸಲಾಯಿತು.

” ಸ್ವರಾಜ್ಯ 75″ 17ನೇ ಮನೆ ಕಾಯ೯ಕ್ರಮದಲ್ಲಿ ಸ.ಪ್ರ.ದ.ಕಾಲೇಜು ಕಾಲೇಜು ಶಂಕರನಾರಾಯಣ ನಿವೃತ್ತ ಪ್ರಾಂಶುಪಾಲರಾಗಿರುವ ಡಾ.ಉದಯ್ ಕುಮಾರ್ ಶೆಟ್ಟಿ ಇವರು ನೆರವೇರಿಸಿದರು.

ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಶ್ರೀ ಚಂದ್ರಶೇಖರ ಶೆಟ್ಟಿ ಚಾಲನೆ ನೀಡಿದರು.

ಕಾಯ೯ಕ್ರಮದಲ್ಲಿ ಶ್ರೀ ನರೆಂದ್ರ ಕುಮಾರ್ ಕೋಟ,ಶ್ರೀ ರವಿರಾಜ್ ಶೆಟ್ಟಿ ಬೆಣ್ಣೆಕುದ್ರು,ಶ್ರೀ ರಾಮಚಂದ್ರ ಐತಾಳ್,ಶ್ರೀ ಬಾಲಚಂದ್ರ ಶೆಟ್ಟಿ,ಶ್ರೀ ಡಾ.ರಮೇಶ್ ಆಚಾಯ೯ ,

ಕಾಯ೯ಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಅರುಣ್ ಕುಮಾರ್ ಹೆಚ್.ಆರ್ ಇವರು ಹಂದಾಡಿ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಇವರ ಸ್ವಾತಂತ್ರ್ಯ ಹೋರಾಟದ ಘಟನೆಯನ್ನು ತಿಳಿಸಿದರು.

ಅಧ್ಯಕ್ಷತೆಯನ್ನು ಶ್ರೀ ಮುರುಗೇಶಿ ಇವರು ವಹಿಸಿದ್ದರು.

ಸ್ವರಾಜ್ಯ75 ಸಂಘಟನೆಯ ನೇತ್ರತ್ವದಲ್ಲಿ ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಉಸಿರು ಕೋಟ,ಹಸ್ತ ಚಿತ್ತ ಫೌಂಡೇಶನ್,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ ,ಇತಿಹ್ಸ ವಿಭಾಗ ಶ್ರೀ.ರುಕ್ಮೀಣಿ ಶೆಡ್ತಿ ಸ.ಪ್ರ.ದ.ಕಾ.ಬಾರಕೂರು ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ , ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ,ಸ್ಥಳೀಯರು ಉಪಸ್ಧಿತರಿದ್ದರು

ಕಾಯ೯ಕ್ರಮ ನಿರೂಪಣೆಯನ್ನು ಶ್ರೀ ಶ್ರೀಪತಿ ಆಚಾಯ೯ ,ಪ್ರಾಸ್ತಾವಿಕವನ್ನು ಸ್ವರಾಜ್ಯ ೭೫ ಕಾಯ೯ಕ್ರಮ ಸಂಚಾಲಕರು ಆಗಿರುವ ಶ್ರೀ ಪ್ರದೀಪ
ಕುಮಾರ್ ಬಸ್ರೂರು ನಡೆಸಿದರು ಶ್ರೀ ಗಣೇಶ್ ಶೆಟ್ಟಿ ಬೆಣ್ಣೆಕುದ್ರು ಅವರು ಧನ್ಯವಾದ ಸಮರ್ಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!