ಸಮಾಜ ಸೇವೆಯ ಆತ್ಮತೃಪ್ತಿ ವಿಶಿಷ್ಟವಾದದ್ದು ಪ್ರಕಾಶ್ ಚಂದ್ರ ಶೆಟ್ಟಿ

ಬ್ರಹ್ಮಾವರ: – ನಮ್ಮ ಆದಾಯದ ಒಂದಂಶವನ್ನು ಸಮಾಜಕ್ಕೆ ಕೊಟ್ಟಾಗ ಅದರಿಂದ ಸಿಗುವಂತಹ ಆತ್ಮ ಸಂತೃಪ್ತಿ ವಿಶಿಷ್ಟವಾದುದು ಎಂದು ಜಿ.ಎಂ ವಿದ್ಯಾನಿಕೇತನ ಹಾರಾಡಿ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಚಂದ್ರ ಶೆಟ್ಟಿ ಹೇಳಿದರು.

ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬ್ರಹ್ಮವರ ಇದರ ವತಿಯಿಂದ ಮಾ 19 ರಂದು ಬ್ರಹ್ಮಾವರ ಸಿಂಧೂರ ಸಭಾ ಭವನದಲ್ಲಿ ನಡೆದ ಸಾಧಕರಿಗೆ ಸನ್ಮಾನ ಮತ್ತು ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಯಂಟ್ಸ್ ಗ್ರೂಪ್ ಸಂಸ್ಥೆಯು ಹಲವಾರು ಜನೋಪಯೋಗಿ ಕಾರ್ಯಕ್ರಮದ ಮೂಲಕ ಇಲ್ಲಿನ ಜನರ ಮನೆಮಾತಾಗಿದೆ ಎಂದು ಶುಭಹಾರೈಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜಯಂಟ್ಸ್ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು.
ವೇದಿಕೆಯಲ್ಲಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕಾಯ೯ದಶಿ೯ ಶ್ರೀನಾಥ್ ಕೋಟ ಉಪಸ್ಥಿತರಿದ್ದರು.
ಈ ಸಂದಭ೯ದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್.ಕಲ್ಮಾಡಿ, ಕ.ಸಾ.ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ, ಪ್ರಾ.ಆರೋಗ್ಯ ಕೇಂದ್ರ ಪೇತ್ರಿಯ ಸಹಾಯಕ ಮಂಜುನಾಥ್ ನಾಯ್ಕ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ ಹೇರೂರು ರವರನ್ನು ಸನ್ಮಾನಿಸಲಾಯಿತು.ಕಾಯ೯ಕ್ರಮದಲ್ಲಿ ವೈದ್ಯರಾದ ಡಾ|| ವಿಶ್ವನಾಥ್ ಪೈ, ಡಾ|| ಮಹೇಶ್ ಐತಾಳ, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ್, ಲೆಕ್ಕ ಪರಿಶೋಧಕ ರಂಜಿತ್ ರಾಜ್, ಕಸಾಪ ಗೌ.ಕಾಯ೯ದಶಿ೯ ಜನಾಧ೯ನ್ ಕೊಡವೂರು ಮುಂತಾದವರಿದ್ದರು. ಅಣ್ಣಯ್ಯದಾಸ್ ವರದಿ ವಾಚಿಸಿದರು.ಮಿಲ್ಟನ್ ಒಲಿವೇರಾ, ರೋನಾಲ್ಡ್, ವಿವೇಕ್ ಕಾಮತ್ ಪರಿಚಯಿಸಿದರು.ಈ ಸಂದಭ೯ದಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.ಸುಂದರ ಪೂಜಾರಿ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply