ಮಂಗಳೂರುನಲ್ಲಿ ಮೀನುಗಾರಿಕೆ ಬೋಟ್‌ ಅಪಘಾತ,2ಸಾವು, 12 ಮಂದಿ ನಾಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಬೋಟ್‌ ಅಪಘಾತವಾಗಿ ಇಬ್ಬರು ಸಾವಿಗೀಡಾಗಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಬಂದರಿನಿಂದ 43 ನಾಟಿಕಲ್‌ ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಂಡಿಯನ್‌ ಕೋಸ್ಟ್‌ ಗಾರ್ಡ್‌, ʻಮೀನುಗಾರರನ್ನು ಹುಡುಕಲು 3 ICG ಹಡಗುಗಳು ಮತ್ತು ಹೆಲಿಕಾಫ್ಟರ್‌ಗಳನ್ನು ನಿಯೋಜಿಸಲಾಗಿದೆʼ ಎಂದು ಹೇಳಿದೆ.

ಮೀನುಗಾರಿಕಾ ಬೋಟ್ ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್‌ನಿಂದ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು ಎನ್ನಲಾಗಿದೆ.

 
 
 
 
 
 
 
 
 
 
 

Leave a Reply