ಬೈಲೂರು ಬ್ರಾಹ್ಮಣ ಸಭಾ, ಉಡುಪಿ. ಇದರ ದಶಮ ಸಂಭ್ರಮದ 8 ನೇ ಸಂಭ್ರಮ

ಬೈಲೂರು ಬ್ರಾಹ್ಮಣ ಸಭಾ ದಶಮ ಸಂಭ್ರಮದ 8ನೇ ಕಾರ್ಯಕ್ರಮವು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ವೇದಮೂರ್ತಿ ವರದರಾಜ್ ಭಟ್ ಹಾಗೂ ಪವಿತ್ರಪಾಣಿ ಶ್ರೀ ಶ್ರೀನಿವಾಸ ಆಚಾರ್ಯ ರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಉದ್ಯಾಪನೆ ಮತ್ತು ಪ್ರಧಾನ ಯಾಗವು 47 ವಿಪ್ರ ದಂಪತಿಗಳು ಕಲಶ ಪೂಜೆ ಮಾಡುವುದರ ಮುಖೇನ ನೆರವೇರಿಸಲ್ಪಟ್ಟಿತು. ಸಭಾ ಕಾರ್ಯಕ್ರಮವು ಬ್ರಾಹ್ಮಣ ಸಭಾ ಯುವ ವೇದಿಕೆಯ ರಮ್ಯಾ ಆಚಾರ್ಯ ಮತ್ತು ಬಳಗದವರಿಂದ ರಾಮಾವತಾರದ ಸ್ತುತಿಯೊಂದಿಗೆ ಪ್ರಾರಂಭಗೊಂಡಿತು. ಅಧ್ಯಕ್ಷ ಶ್ರೀ ಪಿ. ಸುಬ್ರಹ್ಮಣ್ಯ ತಂತ್ರಿಗಳು ಸರ್ವರನ್ನೂ ಸ್ವಾಗತಿಸಿದರು. ಬ್ರಾಹ್ಮಣ ಸಭಾದ ಹಿರಿಯ ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಶ್ರೀನಿವಾಸ ದಂಪತಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಡುಪಿಯ ಶ್ರೀಮದಂನಂತೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕ ಶ್ರೀ ವೇದವ್ಯಾಸ ಐತಾಳರಿಗೆ ಬ್ರಾಹ್ಮಣ ಸಭಾದ ವತಿಯಿಂದ ಗೌರವರ್ಪಣೆ ಮಾಡಲಾಯಿತು. ಗೌರವಾಧ್ಯಕ್ಷ ಶ್ರೀ ರಾಘವೇಂದ್ರ ರಾವ್ ಸನ್ಮಾನಪತ್ರ ವಾಚಿಸಿದರು. ಎರ್ಮಾಳು ಬ್ರಾಹ್ಮಣ ವಲಯದ ಅಧ್ಯಕ್ಷ ಶ್ರೀ ಪುರುಷೋತ್ತಮ ರಾವ್ ಹಾಗೂ ಬೆಳಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀ ನಡಿಮನೆ ವಾದಿರಾಜ ರಾವ್ ಮುಖ್ಯ ಅತಿಥಿಗಳಾಗಿದ್ದರು.ಕಾರ್ಯಕ್ರಮದ ಕೊನೆಯ ಅಂಗವಾಗಿ ಧನ್ಯವಾದ ಸಮರ್ಪಣೆಯನ್ನು ಮಹಿಳಾ ಸಂಚಾಲಕಿ ಶ್ರೀಮತಿ ಜಯಾ ತಂತ್ರಿಯವರು ನಡೆಸಿಕೊಟ್ಟರು.ಕ್ಷೇಮ ನಿಧಿ ಸಂಚಾಲಕಿಯರಾದ ಶ್ರೀಮತಿ ಸುಮಿತ್ರಾ ಕೆರೆಮಠ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾರಂಭದಲ್ಲಿ ಶ್ರೀಮತಿ ಸುಶೀಲಾ ಆರ್. ರಾವ್ ಅವರು ಸ್ವರಚಿತ ಸ್ವಾಗತ ಗೀತೆಯನ್ನು ತಮ್ಮ ಬಳಗದೊಂದಿಗೆ ಹಾಡಿದರು. ಬಳಿಕ ಶ್ರೀಮತಿ ಸಂಗೀತಾ ಬಾಲಚಂದ್ರ ಸಂಯೋಜಿಸಿದ “ರಾಮಾವತಾರ”ದ ಕುರಿತು “ರಾಮ ಗಾನ ಯಾನ”ವನ್ನು  ಶ್ರೀ ಗಿರೀಶ್ ತಂತ್ರಿ ಹಾಗೂ ಶ್ರೀ ವೀಕ್ಷಿತ್ ಕೊಡಂಚ ಇವರ ಹಿನ್ನಲೆ ಸಂಗೀತದೊಂದಿಗೆ ಬ್ರಾಹ್ಮಣ ಸಭಾದ ಸದಸ್ಯರು ಪ್ರಸ್ತುತಪಡಿಸಿದರು. ಭೋಜನಕೊಟದೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.

 
 
 
 
 
 
 

Leave a Reply