ಪಡುಬಿದ್ರಿ ಬೀಚ್ ನಲ್ಲಿ ಬ್ಲೂ ಫ್ಲ್ಯಾಗ್ ಆರೋಹಣ

ಪಡುಬಿದ್ರಿ : ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ಉಡುಪಿ ಜಿಲ್ಲೆಯ ಪಡುಬಿದ್ರೆ ಬೀಚ್ ಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ದೊರೆತಿದೆ. ಈ ಮಾನ್ಯತೆ ದೊರೆತ ರಾಜ್ಯದ ಮೊದಲ ಕಡಲತೀರವಾದ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ನಲ್ಲಿ ಸೋಮವಾರ ರಾಷ್ಟ್ರ ಧ್ವಜದ ಜೊತೆಗೆ ಬ್ಲೂ ಫ್ಲ್ಯಾಗ್ ಆರೋಹಣ ಮಾಡಲಾಯಿತು.

ಹಾಗೆ ಇನ್ನು ಮುಂದೆ ಸಾರ್ವಜನಿಕರ ವಿಹಾರಕ್ಕೆ ಕಡಲತೀರವನ್ನು ಮುಕ್ತಗೊಳಿಸಲಾಯಿತು. ಉಡುಪಿ-ಚಿಕ್ಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಧ್ವಜಾರೋಹಣ ಮಾಡಿದರು. ಸದ್ಯ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಸುಸಜ್ಜಿತ ಬೀಚ್‌ ಆಗಿ ಅಭಿವೃದ್ಧಿ ಮಾಡ ಲಾಗಿದೆ. ಇದೀಗ ಬೀಚ್ನಲ್ಲಿ ಬಿದಿರು ನಿರ್ಮಾಣ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಈ ರೀತಿಯಾಗಿ ಪ್ರವಾಸಿ ಗರನ್ನು ತನ್ನ ಆಕರ್ಷಿಸುತ್ತಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ರಾಜ್ಯ ಜಿಲ್ಲಾಧಿಕಾರಿ ಜಿ. ಜಗದೀಶ, ಜಿ.ಪಂ. ಸಿಇಒ ಡಾ. ನವೀನ್ ಭಟ್ ವೈ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply