Janardhan Kodavoor/ Team KaravaliXpress
26.6 C
Udupi
Monday, November 28, 2022
Sathyanatha Stores Brahmavara

ಕೊರೋನಾ ಭೀತಿ ನಡುವೆ ಯಶಸ್ವಿ ‌ರಕ್ತದಾನ‌ ಶಿಬಿರ

ಅಭಯಹಸ್ತ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ‌ಮಣಿಪಾಲ ಇವರ ‌ಸಹಕಾರದಲ್ಲಿ ಸ್ವಯಂಪ್ರೇರಿತ ರಕ್ತದಾನ‌ ಶಿಬಿರವು ಭಾನುವಾರ ಕೆಎಂಸಿ ‌ಮಣಿಪಾಲ‌ದ ರಕ್ತನಿಧಿ ವಿಭಾಗದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಹಿಂದೂ ಜಾಗರಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಬೈಲೂರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ್, ರಕ್ತದಾನಿಗಳಾದ ದಿನೇಶ್ ಕಾಂಚನ್, ಸಚಿನ್ ಪೂಜಾರಿ, ಅಭಯಹಸ್ತ ಉಡುಪಿ ಇದರ ಸಂಚಾಲಕರಾದ ರಾಜೇಶ್ ಮೆಂಡನ್ ಬೈಪಾಸ್, ರಕ್ತದ ಆಪತ್ ಭಾಂದವ ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು. ಧನುಷ್ ಸ್ವಾಗತಿಸಿ ಕಾರ್ಯಕ್ರಮ ‌ನಿರೂಪಿಸಿದರು. ಸ್ವರೂಪ್ ದನ್ಯವಾದ ಅರ್ಪಿಸಿದರು..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!