ತೆಂಕನಿಡಿಯೂರು: 115 ಯೂನಿಟ್‌ಗಳ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಲಯನ್ಸ್ಕ್ಲಬ್ ಬ್ರಹ್ಮಾವರ, ಬಾರ್ಕೂರು ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಎನ್.ಎಸ್.ಎಸ್., ರೋರ‍್ಸ್-ರೇಂರ‍್ಸ್ ಘಟಕಗಳು, ಹಳೆ ವಿದ್ಯಾರ್ತಿ ಸಂಘ, ಸಾಂಸ್ಕೃತಿಕ ಸಂಘ, ಕ್ರೀಡಾ ಸಂಘಗಳು ಸೇರಿ ರಕ್ತನಿದಿವüಕೇಂದ್ರ, ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಸಹಯೋಗದಲ್ಲಿ ಒಂದು ದಿನದ ರಕ್ತದಾನ ಶಿಬಿರ ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ವೀಣಾ – ರಕ್ತದಾನ ಅತ್ಯಂತ ಪವಿತ್ರವಾದ ಸಮಾಜಸೇವೆಯಾಗಿದ್ದು, ಒಮ್ಮೆ ಮಾಡುವ ರಕ್ತದಾನ ಕನಿಷ್ಟ ನಾಲ್ಕು ಜೀವಗಳನ್ನು ಉಳಿಸಬಲ್ಲುದು. ಭಾರತದಲ್ಲಿ ಜನಸಂಖ್ಯೆಗೆ ಹೋಲಿಸಿದಾಗ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ರಕ್ತದ ಅವಶ್ಯಕತೆಯಿದ್ದು, ವಿದ್ಯಾ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಇನ್ನೂ ಕಾರ್ಯ ಪ್ರವರ್ತರಾಗುವ ಅವಶ್ಯಕತೆಯಿದೆ ಎಂದರು. ಲಯನ್ಸ್ ಕ್ಲಬ್ ಬ್ರಹ್ಮಾವರ, ಬಾರ್ಕೂರು ಇದರ ಪರವಾಗಿ ಮಾತನಾಡಿದ ಕಾರ್ಯದರ್ಶಿ ಮೇಜರ್ ಬಾಲಕೃಷ್ಣ ಶೆಟ್ಟಿ ರಕ್ತದಾನದಿಂದ ನಾವು ಮತ್ತಷ್ಟು ಆರೋಗ್ಯವಂತರಾಗಿ ಬದುಕಬಹುದು. ಯುವ ಜನತೆ ಇದರಲ್ಲಿ ತೊಡಗಿಸಿಕೊಳ್ಳುವುದು. ಉತ್ತಮ ನಾಗರಿಕ ಜವಾಬ್ದಾರಿಯೂ ಹೌದು ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ತೆಂಕನಿಡಿಯೂರು ಕಾಲೇಜಿನಲ್ಲಿ ಪ್ರತೀ ವರ್ಷ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರುತ್ತಿದ್ದು, ಪ್ರತಿ ಬಾರಿಯೂ ನುರಕ್ಕೂ ಮಿಕ್ಕಿ ಯೂನಿಟ್‌ಗಳ ರಕ್ತ ದಾನವಾಗುತ್ತಿರುವುದು ನಮ್ಮ ಹೆಮ್ಮೆ ಎಂದರು. ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಅಧ್ಯಕ್ಷರಾದ ಲಯನ್ ಜಯರಾಂ ಹೆಗ್ಡೆ, ಮಾಜಿ ಅಧ್ಯಕ್ಷರಾದ ಲಯನ್ ಆನಂದ ಗಾಣಿಗ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಧಾಕೃಷ್ಣ, ಸಾಂಸ್ಕೃತಿಕ ಸಂಚಾಲಕರಾದ ಡಾ. ರಾಘವ ನಾಯ್ಕ, ಶ್ರೀ ಕೃಷ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ, ರೇಂರ‍್ಸ್ ಡಾ. ಆಶಾ ಸಿ. ಇಂಗಳಗಿ, ಬೋಧಕ-ಬೋಧಕೇತರ ವೃಂದದ ಜೊತೆ ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ಮಂಜುಶ್ರೀ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ರೋರ‍್ಸ್ ಸಂಚಾಲಕರಾದ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರೆ, ಎನ್.ಎಸ್.ಎಸ್. ವಿದ್ಯಾರ್ಥಿ ಪ್ರತಿನಿಧಿ ಶ್ರಾವ್ಯ ವಂದಿಸಿದರು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ. ನಿರೂಪಿಸಿದರೆ, ಯೂತ್ ರೆಡ್‌ಕ್ರಾಸ್ ಸಂಚಾಲಕರ ಪ್ರಶಾಂತ್ ಎನ್. ಸಹಕರಿಸಿದರು. ಒಟ್ಟು ೧೧೫ ಯೂನಿಟ್‌ಗಳ ರಕ್ತ ಸಂಗ್ರಹಿಸಲಾಯಿತು.

 
 
 
 
 
 
 
 
 
 
 

Leave a Reply