ದುರ್ಬಲ ವರ್ಗದ ಕಲ್ಯಾಣ ಕಾರ್ಯಕ್ರಮ

ಮೋದೀಜಿ ಆಡಳಿತದ ಎಂಟನೇ ವರ್ಷಾಚರಣೆಯ ಅಂಗವಾಗಿ ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ದುರ್ಬಲ ವರ್ಗದ ಕಲ್ಯಾಣ ಕಾರ್ಯಕ್ರಮ ಕಾಪು ವೀರಭದ್ರ ಸಭಾ ಭವನದಲ್ಲಿ ನಡೆಯಿತು. ಕಾಪು ಶಾಸಕರಾದ ಲಾಲಾಜಿ‌ ಆರ್ ಮೆಂಡನ್ ಕಾರ್ಯಕ್ರಮ ಉದ್ಘಾಟಿಸಿದರು. ದುರ್ಬಲ ವರ್ಗದ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ರೇಶ್ಮ ಶೆಟ್ಟಿ ಪ್ರಸ್ತಾವನೆ ಮಾತನ್ನಾಡಿದರು. ಮಂಡಲ ಸಂಚಾಲಕರಾದ ಅನಿಲ್ ಕುಮಾರ್ ಸ್ವಾಗತಿಸಿದರು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ ಆಡಳಿತದ ಸಾಧನೆಗಳು, ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ಶುಭಹಾರೈಸಿದರು. ಇಂದು ದಿವಂಗತರಾದ ಪಕ್ಷದ ಹಿರಿಯರಾದ ಶ್ರೀ ಎ ಜಿ ಕೊಡ್ಗಿ ರವರಿಗೆ ಶ್ರಧ್ದಾಂಜಲಿ ಸಲ್ಲಿಸಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಕಾಪು ಪ್ರಾಧಿಕಾರದ ಅಧ್ಯಕ್ಷರಾದ ಸುಧಾಮ‌ ಶೆಟ್ಟಿ, ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಶೈಲೇಶ್ ಮತ್ತಿತರರು ಉಪಸ್ಥಿತರಿದ್ದರು. ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮಂಡಲ ಉಸ್ತುವಾರಿ ಮಾಲಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಾಶಕ್ತಿಕೇಂದ್ರ ಜಿಲ್ಲಾ ಉಸ್ತುವಾರಿ ಗಂಗಾಧರ ಸುವರ್ಣ ಉಪಸ್ಥಿತರಿದ್ದರು.

ಅರ್ಥಪೂರ್ಣ ಕಾರ್ಯಕ್ರಮದಲ್ಲಿ 17 ಜನ ಪುರಸಭಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಸಾಧಕರಿಗೆ ಗೌರವಾರ್ಪಣೆ ಮಾಡಲಾಯಿತು. 50 ಜನ ದುರ್ಬಲ ವರ್ಗದ ಮನೆಯ ಮಕ್ಕಳಿಗೆ ಪುಸ್ತಕಗಳನ್ನು ಕೊಡೆಯನ್ನು ವಿತರಿಸಲಾಯಿತು.

 
 
 
 
 
 
 
 
 
 
 

Leave a Reply