ನಮೋ ರಾಜ ಮಾಣಿಕ್ಯ : ಒಂದು ವಿಶ್ಲೇಷಣೆ

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರ ಪರಿಕಲ್ಪನೆಯಲ್ಲಿ, ಶಾಸಕರಾದ ಕೆ.ರಘುಪತಿ ಭಟ್ ರವರ ಮಾರ್ಗದರ್ಶನದಲ್ಲಿ ಮತ್ತು ಉಡುಪಿ ನಗರ ಬಿಜೆಪಿ ನಿರ್ಮಾಣದಲ್ಲಿ ಮೂಡಿಬಂದ ಇತ್ತೀಚೆಗೆ ಪ್ರದರ್ಶನಗೊಂಡ ನಾಟಕ “ನಮೋ ರಾಜ್ಯ ಮಾಣಿಕ್ಯ” ಇದರ ವಿಶ್ಲೇಷಣಾ ಕಾರ್ಯಕ್ರಮ ಮಣಿಪಾಲದ ಕಂಟ್ರಿ ಇನ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ನಾಟಕದ ಬಗ್ಗೆ ವಿಶ್ಲೇಷಣೆ ಮಾಡುತ್ತಾ ನಾಟಕದಲ್ಲಿ ಕೆಲವೊಂದು ಸುಧಾರಣೆ ಮಾಡುವ ಅಂಶಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಸಾಮಾಜಿಕ ಕ್ಷೇತ್ರಗಳ ಪ್ರಬುದ್ದ ವಿಮರ್ಶಕರಾದ ಪ್ರೊಫೆಸರ್ ವಿದ್ಯಾವಂತ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಸುರೇಂದ್ರ ಶೆಟ್ಟಿ ಕೊಕ್ಕರ್ಣೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ ಕಲ್ಮಾಡಿ, ಹಿರಿಯ ಕಲಾವಿದರಾದ ಎಮ್.ಎಸ್.ಭಟ್, ಯೋಗೀಶ್ ಕೊಳಲಗಿರಿ, ಕಲಾವಿದರಾದ ಆದರ್ಶ್ ಮತ್ತು ಕಿರಣ್ ರವರು ನಾಟಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಶ್ಲೇಷಿಸಿದರು.

ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್ ರವರು ಕಾರ್ಯಕ್ರಮ ಸಂಯೊಜಿಸಿ ಅಧ್ಯಕ್ಷತೆ ವಹಿಸಿ ಸಂಯೋಜಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ಕೃತಿ ರಚನೆಕಾರ ಮಂಜುನಾಥ್ ಕರಬ,ಜಿಲ್ಲಾ ಬಿಜೆಪಿ ವಕ್ತಾರ, ಗುರುಪ್ರಸಾದ್ ಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ನಾಟಕ ತಂಡದ ಕಲಾವಿದರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply