ಕೊರೋನಾಗೆ ಬಲಿಯಾದ ತಂದೆಯ ಸಮಾಧಿ ಮುಂದೆಯೇ ಪುಟ್ಟ ಮಗಳ ಹುಟ್ಟುಹಬ್ಬ

ಕೊಪ್ಪಳ : ಅಮ್ಮ ಮಗುವನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿರಿಸಿ, ತನ್ನ ಕಂದಮ್ಮನಿಗೆ ಏನೂ ತೊಂದರೆ ಯಾಗದಂತೆ ನೋಡಿಕೊಳ್ಳುವಳು. ಅದೇ ಗರ್ಭದಲ್ಲಿರುವ ಮಗುವಿಗೆ​ ಉಸಿರಾಗಿರುವ ಅಪ್ಪ ನಿಜಕ್ಕೂ ಗ್ರೇಟ್‌!​ .
ಅಮ್ಮ​ ತನ್ನ ಗರ್ಭದಲ್ಲಿರುವ ಮಗುವಿಗಾಗಿ ಕಷ್ಟ-​ ನೋವುಗಳನ್ನು ಸಹಿಸಿ​ ​ಕೊಂಡರೆ, ​ಅ​ಪ್ಪ ತನ್ನ​ ಹೆಂಡತಿಯನ್ನು​ ​ಗರ್ಭದಲ್ಲಿರುವ​ ​ಮಗುವಿನ​ ಕ್ಷೇಮವನ್ನೂ ಎಚ್ಚರದಿಂದ ನೋಡಿಕೊಳ್ಳುವನು​. 
ಅಪ್ಪ ತನ್ನ ಮಗುವಿಗಾಗಿ ತನ್ನ​ ಜೀವನವನ್ನೇ ಮುಡಿಪಾಗಿಟ್ಟಿರುತ್ತಾನೆ.​ ​ಅಪ್ಪ-ಮಗಳ ಬಾಂಧವ್ಯಕ್ಕೆ ಸಾಕ್ಷೀಯೆಂಬಂತೆ  ಕರಳು ಕಿತ್ತು ಬರುವ ದೃಶ್ಯವೊಂದು ಕೊಪ್ಪಳದಲ್ಲಿ ನಡೆದಿದೆ. ಈ ಪುಟ್ಟ ಬಾಲಕಿಯ ತಂದೆ ಕೊರೋನಾಗೆ  ತನ್ನ ಜೀವ ತೆತ್ತಿದ್ದರು.
ಆದರೆ ಮಗಳಿಗೆ ತಂದೆ ತನ್ನ ಬಳಿಯೇ ಇದ್ದಾರೆ ಎಂಬ ನಂಬಿಕೆ ಮೂಡಿಸಿದೆ. ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಂದೆಯ ಸಮಾಧಿ ಮುಂದೆಯೇ ಕೇಕ್ ಕತ್ತರಿಸಿದ್ದಾಳೆ. 
 
ಬಾಲಕಿ ಸ್ಪಂದನಾಳ ತಂದೆ ಮಹೇಶ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕರೊನಾ ಸೋಂಕಿಗೆ ಬಲಿಯಾಗಿದ್ದರು. ತಂದೆ ಕೋವಿಡ್‌ನಿಂದ ಮೃತಪಟ್ಟು ಮಣ್ಣಲ್ಲಿ ಮಣ್ಣಾಗಿದ್ದರೂ, ಇವರ ಮಗಳು ಮಾತ್ರ ತಂದೆ ಪಕ್ಕದಲ್ಲೇ ಇರುವ ರೀತಿ ಸಮಾಧಿಗೇ ಕೇಕ್ ಅನ್ನು ತಿನ್ನಿಸುವ ಮೂಲಕ ತನ್ನ ಪ್ರೀತಿ ಅರ್ಪಿಸಿದ್ದಾಳೆ.
 
 
 
 
 
 
 
 
 
 
 

Leave a Reply